ಭಾನುವಾರ, ಡಿಸೆಂಬರ್ 15, 2019
20 °C
ಮಂಗಳೂರು ವಿಶ್ವವಿದ್ಯಾಲಯ ಚತುಷ್ಪಥ ಕಾಮಗಾರಿ ಅದ್ವಾನ

ಕೆಸರಲ್ಲಿ ಪರದಾಡಿದ ಸವಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಸರಲ್ಲಿ ಪರದಾಡಿದ ಸವಾರರು

ಉಳ್ಳಾಲ: ಅಲ್ಲಿ ಎದ್ದು ಬಿದ್ದು ಕೆಸರಿನಲ್ಲಿ ಹೊರಳಾಡಿ ವಾಹನವನ್ನು ದೂಡಿಕೊಂಡು ಹೋದವರೇ ಜಾಸ್ತಿ. ಮೈ ಪೂರ್ತಿ ಕೆಸರು. ಮಣ್ಣನ್ನು ಹೊತ್ತು ವಾಪಸ್‌ ಮನೆ ಸೇರುವಂತಾದರೆ, ಇನ್ನು ಕೆಲವರು ಅದೇ ಬಟ್ಟೆಯಲ್ಲಿ ವಾಹನದಲ್ಲಿ ಪ್ರಯಾಣಿಸುವಂತಾಯಿತು.

ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಮಂಗಳೂರು ವಿಶ್ವವಿದ್ಯಾಲಯ ಬಳಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ದೇರಳಕಟ್ಟೆ ಆಸ್ಪತ್ರೆ ಎದುದು ಕಂಡು ಬಂದ ದೃಶ್ಯ ಇದು.

ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ನಿತ್ಯಾನಂದನಗರದಲ್ಲಿರುವ ಬ್ಯಾರಿಸ್ ಮಾಲ್ ವರೆಗಿನ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಎರಡು ಭಾಗದ ರಸ್ತೆಗೂ ಮಣ್ಣು ಹಾಕಿ ಎತ್ತರ ಮಾಡಲಾಗಿತ್ತು. ಒಂದು ಬದಿಯ ರಸ್ತೆಯಲ್ಲಿ ಮಣ್ಣನ್ನು ಶೇಖರಿಸಿದ್ದರಿಂದಾಗಿ ಏಕಮುಖ ಸಂಚಾರ ಮಾತ್ರವಿತ್ತು.

ಭಾನುವಾರ ಸಂಜೆ  ಮಳೆಯಿಂದಾಗಿ ಮಣ್ಣು ಕೆಸರಾಗಿ ವಾಹನಗಳು ತೆರಳುವಾಗ ಜಾರಲು ಆರಂಭವಾಗಿತ್ತು. ಹಲವು ಬಸ್ಸುಗಳು ಅರಿವಿಲ್ಲದೆ ತೆರಳಿದ್ದರಿಂದಾಗಿ ಮಾರ್ಗಮಧ್ಯೆ ಜಾರಲು ಆರಂಭಿಸಿದ್ದರಿಂದಾಗಿ ಮುಂದೆ ಪ್ರಯಾಣಿಸಲು ಅಸಾಧ್ಯವಾಯಿತು. ದ್ವಿಚಕ್ರ ವಾಹನ ಹೂತು ಸವಾರರು ಕೆಸರಿನಲ್ಲಿ ಬಿದ್ದು ಮೈಪೂರ್ತಿ ಕೆಸರು ಮಾಡಿಕೊಂಡರು. ಸಂಚಾರ ಪೊಲೀಸರು ಸ್ಥಳಕ್ಕೆ ಬಂದು  ವಾಹನ ಸವಾರರಿಗೆ ಹೋಗದಂತೆ ತಡೆದರೂ ಹಲವರು ಅದೇ ಮಾರ್ಗವಾಗಿ ತೆರಳಿದ್ದರಿಂದಾಗಿ ಇಕ್ಕಟ್ಟಿನಲ್ಲಿ ಸಿಲುಕುವಂತಾಯಿತು.

ಪರ್ಯಾಯ ಮಾರ್ಗ: ಕೆ.ಎಸ್.ಹೆಗ್ಡೆ ಆಸ್ಪತ್ರೆ ಹಿಂಭಾಗದಿಂದ ದೇರಳಕಟ್ಟೆ ತಲುಪುವ ಮಾರ್ಗವನ್ನು ಪರ್ಯಾಯ ಮಾರ್ಗವಾಗಿ ಉಪಯೋಗಿಸಿ ವಾಹನ ಗಳನ್ನು ಪೊಲೀಸರು ಕಳುಹಿಸಿದರು.

ಪ್ರತಿಕ್ರಿಯಿಸಿ (+)