ಪುರಷರ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

7

ಪುರಷರ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

Published:
Updated:
ಪುರಷರ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

ಗೋಲ್ಡ್‌ ಕೋಸ್ಟ್‌: ಭಾರತದ ಪುರಷರ ತಂಡದವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಚಿನ್ನ ಗೆದ್ದು ಸ್ಮರಣೀಯ ಸಾಧನೆ ತೋರಿದರು.

ಸೋಮವಾರ ನಡೆದ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 3–0ರಿಂದ ಬಲಿಷ್ಠ ಜೈಜೀರಿಯಾ ತಂಡಕ್ಕೆ ಆಘಾತ ನೀಡಿತು.

ಭಾನುವಾರವಷ್ಟೇ ಬಾರತದ ಮಹಿಳಾ ತಂಡ ಸಿಂಗಪುರ ತಂಡದ ವಿರುದ್ಧ ಚಿನ್ನ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಇದರ ಹಿಂದೆಯೇ ಪುರುಷರ ತಂಡ ಈ ಸಾಧನೆ ತೋರಿದೆ. ಈ ಮೂಲಕ ಭಾರತ ಎರಡೂ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.

ಕಾಂನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟೇಬಲ್‌ ಟೆಸಿಸ್‌ ಸೇರ್ಪಡೆಯಾದ ಬಳಿಕ ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ಎರಡೂ ವಿಭಾಗದಲ್ಲಿ ಭಾರತ ಗೆಲುವು ಪಡೆದ ಸಾಧನೆ ಮಾಡಿದೆ.

ಗ್ಲಾಸ್ಗೊದಲ್ಲಿ ನಡೆದ ಕೂಟದಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ನಿರಾಶದಾಯಕ ಪ್ರದರ್ಶನದಿಂದಾಗಿ ಡಬಲ್ಸ್‌ನಲ್ಲಿ ಬೆಳ್ಳಿ ಪದಕವನ್ನಷ್ಟೇ ಗೆಲ್ಲಲು ಸಾಧ್ಯವಾಗಿದ್ದ ಭಾರತ ತಂಡ ನಾಲ್ಕು ವರ್ಷಗಳ ಬಳಿಕ ಉತ್ತಮ ಸಾಧನೆ ತೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry