‘ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ’

7

‘ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ’

Published:
Updated:

ಕೆಂಭಾವಿ: ಪಟ್ಟಣದ ಯೂತ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಬಿಜೆಪಿ ಪ್ರಮುಖ ಮುಖಂಡ ಸುಧಾಕರ ಡಿಗ್ಗಾವಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ಹಿರಿಯ ಕಾರ್ಯಕರ್ತರನ್ನು ಕಡೆಗಣಿಸ ಲಾಗುತ್ತದೆ. ಶರಣಬಸಪ್ಪ ದರ್ಶನಾಪುರ ಅವರ ಜನಪರ ಕಾಳಜಿ ಹೊಂದಿದ್ದು, ಅವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ಸೇರಿದ್ದೇನೆ’ ಎಂದು ಹೇಳಿದರು.ಇದೇ ವೇಳೆ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿ ಪಾಟಿಲ್, ವಾಮನರಾವ ದೇಶಪಾಂಡೆ, ಶರಣಬಸ್ಸು ದಿಗ್ಗಾವಿ, ದೇವಪ್ಪ ಮ್ಯಾಗೇರಿ, ಮಹಿಪಾಲರೆಡ್ಡಿ ದಿಗ್ಗಾವಿ, ರಾಘವೇಂದ್ರ ದೇಶಪಾಂಡೆ, ರಫೀಕ್ ವಡಕೇರಿ, ರಹೀಮಾನ್ ಪಟೇಲ್ ಯಲಗೋಡ, ಸೋಮಲಿಂಗಪ್ಪ ದೋಡ್ಡಮನಿ, ರಂಗಪ್ಪ ಬೋವಿ, ಬಾಬು ದೇವರಮನಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry