ಗುರುವಾರ , ಡಿಸೆಂಬರ್ 12, 2019
20 °C

ಆಯೇಷಾ ಟಾಕಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯೇಷಾ ಟಾಕಿಯಾ

ರೂಪದರ್ಶಿ, ನಟಿ ಆಯೇಷಾ ಟಾಕಿಯಾ ಅವರ ಜನ್ಮದಿನ ಈ ದಿನ (ಏಪ್ರಿಲ್ 10, 1986). ‘ಐ ಆ್ಯಮ್ ಎ ಕೋಂಪ್ಲಾನ್ ಗರ್ಲ್‌’ ಎನ್ನುತ್ತಾ ಹದಿನೈದರ ಹರೆಯದಲ್ಲೇ ಜಾಹೀರಾತು ಕ್ಷೇತ್ರ ಪ್ರವೇಶಿಸಿದವರು ಆಯೇಷಾ. ‘ಟಾರ್ಜನ್‌– ದ ವಂಡರ್ ಕಾರ್’ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬಂದ ಆಯೇಷಾ, ಅಭಿಯಸಿದ್ದು ಕೆಲವೇ ಚಿತ್ರಗಳು.

2004ರಿಂದ 2013ರವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ ಆಯೇಷಾ ವಿವಾಹದ ನಂತರ ಅಭಿನಯಕ್ಕೆ ಗುಡ್ ಬೈ ಹೇಳಿದರು. ಆದರೆ, ಕಂಠದಾನ ಕಲಾವಿದೆ, ಕಿರುತೆರೆಯಲ್ಲಿ ನಿರೂಪಕಿಯಾಗಿ ಆಯೇಷಾ ಈಗ ಜನಪ್ರಿಯರು.

‘ಡೋರ್’ ಸಿನಿಮಾದಲ್ಲಿ ವಿಧವೆ ಪಾತ್ರದಲ್ಲಿ ನಟಿಸಿ ಸಿನಿ ವಿಮರ್ಶಕರ ಗಮನ ಸೆಳೆದ ಆಯೇಷಾ, ಫಿಲಂಫೇರ್ ಹೊಸ ನಟಿ ಮತ್ತು  ಸ್ಕೀನ್ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿಕ್ರಿಯಿಸಿ (+)