ಭಾನುವಾರ, ಡಿಸೆಂಬರ್ 15, 2019
25 °C

ಹಿಮಾಚಲ ಪ್ರದೇಶ: ಶಾಲಾ ಬಸ್‌ ಕಮರಿಗೆ ಬಿದ್ದು 26 ವಿದ್ಯಾರ್ಥಿಗಳು ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹಿಮಾಚಲ ಪ್ರದೇಶ: ಶಾಲಾ ಬಸ್‌ ಕಮರಿಗೆ ಬಿದ್ದು 26 ವಿದ್ಯಾರ್ಥಿಗಳು ಸಾವು

ಕಾಂಗ್ರಾ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನೂರ್‌ಪುರದಲ್ಲಿ ಸೋಮವಾರ ಶಾಲಾ ಬಸ್‌ ಆಳವಾದ ಕಮರಿಗೆ ಬಿದ್ದು, 26 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಶಾಲಾ ಬಸ್‌ ದುರಂತದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿದೆ ಎಂದು ಹಿಮಾಚಲ ಪ್ರದೇಶ ಶಿಕ್ಷಣ ಸಚಿವ ಸುರೇಶ್‌ ಭರದ್ವಾಜ್‌ ಖಚಿತಪಡಿಸಿದ್ದರು. ನಂತರ ಲಭ್ಯವಾದ ಮಾಹಿತಿ ಪ್ರಕಾರ 26 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರತಿಕ್ರಿಯಿಸಿ (+)