ಮಂಗಳವಾರ, ಡಿಸೆಂಬರ್ 10, 2019
26 °C

‘ಹೇ ರಾಮ್‌’: ಹಕ್ಕು ಪಡೆದ ಶಾರುಖ್‌

Published:
Updated:
‘ಹೇ ರಾಮ್‌’: ಹಕ್ಕು ಪಡೆದ ಶಾರುಖ್‌

ಬಾಲಿವುಡ್‌ ನಟ ಶಾರುಖ್‌ ಖಾನ್‌ ‘ಹೇ ರಾಮ್‌’ ಸಿನಿಮಾದ ರಿಮೇಕ್‌ ಹಕ್ಕು ಪಡೆದುಕೊಂಡಿರುವ ವಿಷಯವನ್ನು ಈ ಸಿನಿಮಾದ ನಿರ್ದೇಶಕ ಕಮಲ್‌ ಹಾಸನ್‌ ಖಚಿತಪಡಿಸಿದ್ದಾರೆ. 2000ನೇ ಇಸವಿಯಲ್ಲಿ ಹಿಂದಿ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಶಾರುಖ್‌ ಖಾನ್‌ ಇಬ್ಬರೂ ‘ಬೆಸ್ಟ್‌ ಫ್ರೆಂಡ್ಸ್‌’ ಆಗಿ ನಟಿಸಿದ್ದರು.

ನಾಥೂರಾಮ್‌ ಗೋಡ್ಸೆಯಿಂದ ಮಹಾತ್ಮ ಗಾಂಧಿಯ ಹತ್ಯೆಯಾದ ನಂತರ ಕೋಲ್ಕತ್ತ ಸೇರಿದಂತೆ ಬಂಗಾಳದ ವಿವಿಧೆಡೆ ನಡೆದಿದ್ದ ಗಲಭೆಗಳನ್ನು ಆಧರಿಸಿ ‘ಹೇ ರಾಮ್‌’ ನಿರ್ಮಿಸಲಾಗಿತ್ತು.

‘ಈ ಸಿನಿಮಾದ ಸಂಭಾವನೆಯಾಗಿ ಕೈಗಡಿಯಾರವನ್ನು ಮಾತ್ರ ಶಾರುಖ್‌ಖಾನ್‌ ಪಡೆದಿದ್ದರು. ಈಗ ಅವರು ಅದೇ ವಾಚ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದು, ಈ ಚಿತ್ರದ ರಿಮೇಕ್‌ ಹಕ್ಕುಗಳನ್ನು ಪಡೆದಿರುವುದು ಸಂತಸ ತಂದಿದೆ’ ಎಂದು ಕಮಲ್‌ ಹಾಸನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೂಲ ಚಿತ್ರದಲ್ಲಿ ರಾಣಿ ಮುಖರ್ಜಿ, ಹೇಮಾಮಾಲಿನಿ, ನಾಸಿರುದ್ದೀನ್‌ ಶಾ, ಓಂಪುರಿ, ಅತುಲ್‌ ಕುಲಕರ್ಣಿ, ವಿಕ್ರಂ ಗೋಖಲೆ, ವಸುಂಧರಾ ದಾಸ್‌ ನಟಿಸಿದ್ದರು.

ಪ್ರತಿಕ್ರಿಯಿಸಿ (+)