ಕೆ.ಎಸ್‌.ಪುಟ್ಟಣ್ಣಯ್ಯಗೆ ಬೋಧಿವೃಕ್ಷ ಪ್ರಶಸ್ತಿ

7

ಕೆ.ಎಸ್‌.ಪುಟ್ಟಣ್ಣಯ್ಯಗೆ ಬೋಧಿವೃಕ್ಷ ಪ್ರಶಸ್ತಿ

Published:
Updated:

ಬೆಂಗಳೂರು: ಅಂಬೇಡ್ಕರ್‌ ಶತಮಾನೋತ್ಸವ ಸಮಿತಿ ಟ್ರಸ್ಟ್‌ ಹಾಗೂ ಸ್ಫೂರ್ತಿಧಾಮ ನೀಡುವ ಬೋಧಿವೃಕ್ಷ ಪ್ರಶಸ್ತಿಗೆ (ಮರಣೋತ್ತರ) ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

ಕಾರ್ಮಿಕ ಸಂಘಟನೆ ನಾಯಕಿ ಎಸ್‌.ವರಲಕ್ಷ್ಮಿ, ಪವಾಡ ರಹಸ್ಯ ಬಯಲು ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸುತ್ತಿರುವ ಹುಲಿಕಲ್‌ ನಟರಾಜ್‌, ಹೋರಾಟ

ಗಾರ್ತಿ ರೂಪಾ ಹಾಸನ, ಗಾಯಕ ಗೊಲ್ಲರಹಳ್ಳಿ ಶಿವಪ್ರಸಾದ್‌ ಹಾಗೂ ದೇವದಾಸಿ ಹೆಣ್ಣುಮಕ್ಕಳ ಸಂಘಟಕಿ ಚಂದ್ರಮ್ಮಗೋಳ ಅವರನ್ನು ‘ಬೋಧಿ

ವರ್ಧಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ₹20 ಸಾವಿರ ಹಾಗೂ ಫಲಕ ಒಳಗೊಂಡಿದೆ. ಏಪ್ರಿಲ್‌ 14ರಂದು‌ ಸ್ಫೂರ್ತಿಧಾಮದಲ್ಲಿ ನಡೆಯುವ ಅಂಬೇಡ್ಕರ್‌ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಏ.13ರ ಸಂಜೆ 5ಕ್ಕೆ ಭಾರತದ ರಾಜಕೀಯ ಮತ್ತು ಧಾರ್ಮಿಕ ಸಂಕಥನದ ಬದಲಾಗುತ್ತಿರುವ ಚೌಕಟ್ಟು ಗಳು’ ವಿಷಯದ ಕುರಿತು ಪೊ.ರಾಮ್‌ ಪುನಿಯಾನಿ ಉಪನ್ಯಾಸ ನೀಡಲಿದ್ದು, ಪತ್ರಕರ್ತ ಇಂದೂಧರ ಹೊನ್ನಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.

ಏ.14ರ ಬೆಳಿಗ್ಗೆ 11ಕ್ಕೆ ‘ನನ್ನ ದೇಶ, ನನ್ನ ಬದುಕು’ ವಿಷಯದ ಕುರಿತು ಸಾಂಸ್ಕೃತಿಕ ಸಂವಾದವಿದ್ದು, ಪ್ರೊ.ಬಾಬು ಮ್ಯಾಥ್ಯು, ಶ್ರೀಪಾದ್ ಭಟ್, ಅಖಿಲಾ ವಾಸನ್, ವಿಜಯ್‌ಕುಮಾರ್ ಎಸ್. ಹಾಗೂ ಬಿ.ಯು.ಸುಮಾ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಗಮೋಹನದಾಸ್, ವಿಮರ್ಶಕ ಪ್ರೊ.ರಹಮತ್ ತರೀಕೆರೆ, ಬಿ.ಟಿ.ಲಲಿತಾ ನಾಯಕ್‌ ಭಾಗವಹಿಸಲಿದ್ದು, ಸ್ಫೂರ್ತಿಧಾಮದ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry