ಬೆಳ್ಳಿಹಬ್ಬದ ಸಂಭ್ರಮದಲ್ಲಿ ‘ಪಿಆರ್‌ಡಿಸಿ‘

7

ಬೆಳ್ಳಿಹಬ್ಬದ ಸಂಭ್ರಮದಲ್ಲಿ ‘ಪಿಆರ್‌ಡಿಸಿ‘

Published:
Updated:

ಬೆಂಗಳೂರು: ‘ದಿನದ 24 ಗಂಟೆಯೂ ವಿದ್ಯುತ್‌ ಪೂರೈಸುವುದು ಬಹುದೊಡ್ಡ ಸವಾಲು. ಇದು ಸಾಧ್ಯವಾಗಿಸಲು ಮೈಕ್ರೊ ಗ್ರಿಡ್‌ (ಸಣ್ಣ ಗ್ರಿಡ್‌) ಬಳಕೆ ಹೆಚ್ಚು ಸೂಕ್ತವಾಗಿದೆ’ ಎಂದು ಪವರ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆಯ  (ಪಿಆರ್‌ಡಿಸಿ) ನಿರ್ದೇಶಕ ಡಾ. ನಾಗರಾಜ ರಾಮಪ್ಪ ಹೇಳಿದರು.

ಸಂಸ್ಥೆಯ ರಜತ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘24 ವರ್ಷಗಳಿಂದ ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಕರ್ನಾಟಕ ದಲ್ಲಿ ವಿದ್ಯುತ್ ಶಕ್ತಿಯ ಉತ್ಪಾದನೆ ಮತ್ತಿತರ ಕ್ಷೇತ್ರಗಳಲ್ಲಿ ಸಲಹೆ ನೀಡುತ್ತಾ ಬಂದಿರುವ ಸಂಸ್ಥೆಯು 25ನೇ ವಸಂತಕ್ಕೆ ಕಾಲಿಡಲಿದೆ. 2019ರಲ್ಲಿ ರಜತ ಮಹೋತ್ಸವ ಆಚರಿಸಲಿದೆ’ ಎಂದರು.

‘ನವೀಕರಿಸಬಹುದಾದ ಇಂಧನಗಳ ಸಮರ್ಪಕ ಬಳಕೆಯ ನಿಟ್ಟಿನಲ್ಲಿ ಸರ್ಕಾರಕ್ಕೆ, ಸಂಬಂಧಪಟ್ಟ ಆಯೋಗಗಳಿಗೆ ಸಲಹೆ, ಸೂಚನೆ ನೀಡುತ್ತಾ ಬಂದಿದ್ದೇವೆ. ವಿದ್ಯುತ್‌ ಚಾಲಿತ ವಾಹನ ಗಳಿಗೆ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಮುಂದಿರುವ ಸವಾಲು ಆಗಿದೆ. ಅಡುಗೆ ಅನಿಲದ ಸಿಲಿಂಡರ್ ಮರುಭರ್ತಿ ಮಾಡುವ ರೀತಿಯಲ್ಲಿಯೇ ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕ ಪಿ. ಮುಕುಂದ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry