ಸ್ಕ್ವಾಷ್‌: ಡಬಲ್ಸ್‌ನಲ್ಲಿ ದೀಪಿಕಾ– ಜೋಷ್ನಾಗೆ ಪದಕದ ಕನಸು

ಮಂಗಳವಾರ, ಮಾರ್ಚ್ 26, 2019
33 °C
ಇಂದಿನಿಂದ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಹೋರಾಟ

ಸ್ಕ್ವಾಷ್‌: ಡಬಲ್ಸ್‌ನಲ್ಲಿ ದೀಪಿಕಾ– ಜೋಷ್ನಾಗೆ ಪದಕದ ಕನಸು

Published:
Updated:
ಸ್ಕ್ವಾಷ್‌: ಡಬಲ್ಸ್‌ನಲ್ಲಿ ದೀಪಿಕಾ– ಜೋಷ್ನಾಗೆ ಪದಕದ ಕನಸು

ಗೋಲ್ಡ್‌ ಕೋಸ್ಟ್‌: ಭಾರತದ ದೀಪಿಕಾ ಪಳ್ಳಿಕಲ್‌ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕ್ವಾಷ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಕನಸು ಹೊತ್ತಿದ್ದಾರೆ.

ಆಕ್ಸೆನ್‌ಫರ್ಡ್‌ ಸ್ಟುಡಿಯೋಸ್‌ನ ಮೂರನೆ ಅಂಕಣದಲ್ಲಿ ಮಂಗಳವಾರ ನಡೆಯುವ ಮಹಿಳೆಯರ ಡಬಲ್ಸ್‌ ವಿಭಾಗದ ‘ಸಿ’ ಗುಂಪಿನ ಪಂದ್ಯದಲ್ಲಿ ದೀಪಿಕಾ ಮತ್ತು ಜೋಷ್ನಾ, ಪಾಕಿಸ್ತಾನದ ಫೈಜಾ ಜಾಫರ್‌ ಮತ್ತು ಮದಿನಾ ಜಾಫರ್‌ ವಿರುದ್ಧ ಸೆಣಸಲಿದ್ದಾರೆ.

2014ರ ಗ್ಲಾಸ್ಗೊ ಕೂಟದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಜೋಷ್ನಾ ಮತ್ತು ದೀಪಿಕಾ, ಗೋಲ್ಡ್‌ ಕೋಸ್ಟ್‌ನಲ್ಲೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ನಿರಾಸೆ ಕಂಡಿರುವ ಭಾರತದ ಜೋಡಿ, ಮದಿನಾ ಮತ್ತು ಫೈಜಾ ವಿರುದ್ಧ ಸುಲಭವಾಗಿ ಗೆಲ್ಲುವ ನಿರೀಕ್ಷೆ ಇದೆ.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ದೀಪಿಕಾ ಮತ್ತು ಸೌರವ್‌ ಘೋಷಾಲ್‌ ಜೊತೆಯಾಗಿ ಆಡಲಿದ್ದಾರೆ.

‘ಇ’ ಗುಂಪಿನ ಹೋರಾಟದಲ್ಲಿ ದೀಪಿಕಾ ಮತ್ತು ಸೌರವ್‌, ಗಯಾನದ ಮೇರಿ ಫಂಗ್‌ ಫ್ಯಾತ್‌ ಮತ್ತು ಜೇಸನ್‌ ರಾಯ್‌ ಖಲೀಲ್‌ ವಿರುದ್ಧ ಆಡಲಿದ್ದಾರೆ.

‘ಎಚ್‌’ ಗುಂಪಿನಲ್ಲಿ ಸ್ಥಾನ ಪಡೆದಿರುವ ಜೋಷ್ನಾ ಮತ್ತು ಹರಿಂದರ್‌ ಪಾಲ್‌ ಸಿಂಗ್‌ ಸಂಧು, ಮೊದಲ ಪಂದ್ಯದಲ್ಲಿ ಕ್ಯಾರೋಲಿನಾ ಲಿಯಾಂಗ್‌ ಮತ್ತು ಜೇಕಬ್‌ ಕೆಲ್ಲಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry