ಶುಕ್ರವಾರ, ಡಿಸೆಂಬರ್ 6, 2019
23 °C

ಶ್ರೀಹರಿ ನಟರಾಜ್‌ಗೆ ನಿರಾಸೆ

Published:
Updated:
ಶ್ರೀಹರಿ ನಟರಾಜ್‌ಗೆ ನಿರಾಸೆ

ಗೋಲ್ಡ್ ಕೋಸ್ಟ್‌: ಭಾರತದ ಈಜುಪಟು ಶ್ರೀಹರಿ ನಟರಾಜ್‌ ಪುರುಷರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಿಂದ ಹೊರಬಿದ್ದರು. ಎರಡನೇ ಹೀಟ್‌ನಲ್ಲಿ ಅವರು ಆರನೇ ಸ್ಥಾನ ಗಳಿಸಿದರು. ಸ್ಪರ್ಧೆಯಲ್ಲಿ ಒಟ್ಟು ಏಳು ಮಂದಿ ಇದ್ದರು.

ಕ್ಯಾಮರಾನ್‌ ಹ್ಯಾಟ್ರಿಕ್‌: ಆ್ಯಡಂ ಪೀಟಿಗೆ ಆಘಾತ ನೀಡಿದ ದಕ್ಷಿಣ ಆಫ್ರಿಕಾದ ಕ್ಯಾಮರಾನ್‌ ವ್ಯಾನ್‌ ಡೆರ್‌ ಬರ್ಗ್‌ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದರು. 26.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು 50 ಮೀಟರ್ಸ್‌ ವಿಭಾಗದ ಸ್ಪರ್ಧೆಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಪ್ರತಿಕ್ರಿಯಿಸಿ (+)