ಮಂಗಳವಾರ, ಆಗಸ್ಟ್ 4, 2020
25 °C

‘ಪಂದ್ಯಕ್ಕೆ ತಿರುವು ನೀಡಿದ ಸುನಿಲ್‌ ಇನ್ನಿಂಗ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಂದ್ಯಕ್ಕೆ ತಿರುವು ನೀಡಿದ ಸುನಿಲ್‌ ಇನ್ನಿಂಗ್ಸ್‌’

ಕೋಲ್ಕತ್ತ: ಸುನಿಲ್‌ ನಾರಾಯಣ್‌ ಅವರ ಅಮೋಘ ಅರ್ಧಶತಕದ ಬಲದಿಂದ ಚೊಚ್ಚಲ ಪಂದ್ಯದಲ್ಲೇ ಕೆಕೆಆರ್ ತಂಡಕ್ಕೆ ಗೆಲುವು ಒಲಿಯಿತು ಎಂದು ಆರ್‌ಸಿಬಿಯ ಬ್ಯಾಟ್ಸ್‌ಮನ್‌ ಮಂದೀಪ್‌ ಸಿಂಗ್‌ ಹೇಳಿದರು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳ ನಡುವೆ ಭಾನುವಾರ ನಡೆದ ಹಣಾಹಣಿಯ ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಪಂದ್ಯದಲ್ಲಿ ಕೆಕೆಆರ್ ತಂಡವು 4 ವಿಕೆಟ್‌ಗಳ ಅಂತರದಿಂದ ಜಯಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿಯು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 176 ರನ್ ಗಳಿಸಿತ್ತು. ಕೆಕೆಆರ್ ತಂಡವು 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 ರನ್ ಗಳಿಸಿ ಗೆದ್ದಿತು. ಸುನಿಲ್ ನಾರಾಯಣ್ (50; 19ಎ, 5ಸಿ, 4ಬೌಂ) ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ  ಸೇರಿಸಿದ್ದರು.

‘ನಮ್ಮಿಂದ ಪಂದ್ಯ ಕೈ ಜಾರಲು ನಾರಾಯಣ್‌ ಅವರ ಭರ್ಜರಿ ಬ್ಯಾಟಿಂಗ್‌ ಕಾರಣ. ಯಾವುದೇ ತಂಡವಾದರೂ ಮೊದಲ ಆರು ಓವರ್‌ಗಳಲ್ಲಿ ಉತ್ತಮ ಆರಂಭ  ಗಳಿಸಿದರೆ, ಪಂದ್ಯದ ಮೇಲೆ ಸಾಕಷ್ಟು ಹಿಡಿತ ಸಾಧಿಸಬಹುದು ’ ಎಂದು ತಿಳಿಸಿದರು.

‘ನಮ್ಮದು ಹೋರಾಟದ ಮೊತ್ತವಾಗಿದ್ದರೂ, ಇನ್ನೂ 15 ರಿಂದ 20 ಹೆಚ್ಚಿನ ರನ್‌ಗಳನ್ನು ಸೇರಿಸಿದ್ದರೆ ಎದುರಾಳಿ ತಂಡಕ್ಕೆ ಸವಾಲು ಒಡ್ಡಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.