ಶುಕ್ರವಾರ, ಡಿಸೆಂಬರ್ 6, 2019
25 °C

ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಳಿಕ ನೀಲಿ ಬಣ್ಣ!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಪ್ರತಿಮೆಗೆ ಕೇಸರಿ ಬಳಿಕ ನೀಲಿ ಬಣ್ಣ!

ಲಖನೌ: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಕೇಸರಿಮಯಗೊಂಡಿದ್ದ ಅಂಬೇಡ್ಕರ್ ಅವರ ಪ್ರತಿಮೆ ಇದೀಗ ನೀಲಿ ಬಣ್ಣ ಪಡೆದುಕೊಂಡಿದೆ.

ಇಲ್ಲಿನ ಬಿಎಸ್‌ಪಿ ಮುಖಂಡ ಹಿಮೇಂದರ್ ಗೌತಮ್ ಅವರು ತಾವೇ ಖುದ್ದಾಗಿ ನಿಂತು ಅಂಬೇಡ್ಕರ್ ಅವರ ಪ್ರತಿಮೆಯಲ್ಲಿನ ಕೇಸರಿ ಬಣ್ಣವನ್ನು ತೆಗೆದು ಹಾಕಿ ನೀಲಿ ಬಣ್ಣ ಹಚ್ಚಿಸಿದ್ದಾರೆ.

ಭಾನುವಾರ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಅವರ ಹೊಸ ಪ್ರತಿಮೆ ಅನಾವರಣಗೊಂಡಿತು. ಆದರೆ ಈ ಪ್ರತಿಮೆ ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ ಇದ್ದುದನ್ನು ನೋಡಿ ಜನರು ಆಶ್ಚರ್ಯಗೊಂಡರು. ಜಿಲ್ಲಾಡಳಿತ ಈ ಕುರಿತು ಯಾವುದೇ ವಿವರಣೆ ನೀಡಿರಲಿಲ್ಲ.

ಪ್ರತಿಕ್ರಿಯಿಸಿ (+)