ಶುಕ್ರವಾರ, ಡಿಸೆಂಬರ್ 13, 2019
19 °C

ಅಧಿಕಾರಿಗಳು ಸತ್ತಿದ್ದಾರೆಯೇ? ಎಂದು ಹರಿಹಾಯ್ದ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳು ಸತ್ತಿದ್ದಾರೆಯೇ? ಎಂದು ಹರಿಹಾಯ್ದ ಯಡಿಯೂರಪ್ಪ

ಕೊಪ್ಪಳ: ‘ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಆದರೆ ಅಧಿಕಾರಿಗಳು ಸತ್ತಿದ್ದಾರೆಯೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ‌.ಎಸ್.ಯಡಿಯೂರಪ್ಪ ಹರಿಹಾಯ್ದರು.

ಗಂಗಾವತಿಯ ವಿದ್ಯಾನಗರದಲ್ಲಿನ ಭತ್ತದ ಗದ್ದೆಗೆ ಮಂಗಳವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ತುಂಗಭದ್ರಾ ಜಲಾಶಯದ ನೀರಿನ ಅಸಮರ್ಪಕ ನಿರ್ವಹಣೆಯಿಂದ ಎರಡನೇ ಬೆಳೆಗೆ ನೀರು ಇಲ್ಲವಾಗಿದೆ‌. ಭತ್ತ ಜೊಳ್ಳಾಗಿದೆ. ₹ 500 ಕೋಟಿ ಮೌಲ್ಯದ ಭತ್ತ ನಷ್ಟವಾಗಿದೆ’ ಎಂದರು.

‘ಚುನಾವಣೆ ವೇಳೆಯಲ್ಲಿ ರೈತರ ಭೇಟಿ ಏಕೆ ಎಂಬ ಪ್ರಶ್ನೆಗೆ ರೇಗಿದ ಬಿ‌ಎಸ್ ವೈ, ನಾನು ಯಾವಾಗ ಬರಬೇಕು ಎಂದು ನಿಮ್ಮಲ್ಲಿ ಕೇಳಬೇಕಾಗಿಲ್ಲ’ ಎಂದರು.

ಯಡಿಯೂರಪ್ಪ ಅವರು ಚನ್ನಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೈತರ ಹಿತರಕ್ಷಣೆಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಿಜೆಪಿ ಮುಖಂಡರು ಮತ್ತು ರೈತರು ಹಸಿರು ಶಾಲು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಮುಷ್ಟಿ–ಅಕ್ಕಿ’ ಅಭಿಯಾನದಲ್ಲಿ ಸಂಗ್ರಹಿಸಿದ ಅಕ್ಕಿಯಿಂದ ತಯಾರಿಸಿದ ಊಟವನ್ನು ಯಡಿಯೂರಪ್ಪ ಸೇವಿಸಿದರು.

ಪ್ರತಿಕ್ರಿಯಿಸಿ (+)