ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನಿಂದ ಸಮೃದ್ಧ ಸೌಂದರ್ಯ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಾವಿನ ಹಣ್ಣಿನ ಋತು ಆರಂಭವಾಗಿದೆ. ಪುಟಾಣಿಗಳಿಂದ ಅಜ್ಜ– ಅಜ್ಜಿಯರೂ ಎಲ್ಲರೂ ಇಷ್ಟಪಟ್ಟು ತಿನ್ನುವ ಹಣ್ಣು ಮಾವು. ರುಚಿಕರವಾದ ಮಾವಿನ ಅಗಾಧ ಪೋಷಕಾಂಶಗಳೂ ಆರೋಗ್ಯಕ್ಕೆ ಹಿತಕಾರಿ. ಮಾವು ಸೌಂದರ್ಯವರ್ಧಕವೂ ಹೌದು.

* ಮಾವಿನಲ್ಲಿ ವಿಟಮಿನ್‌ ಎ ಅಂಶ ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಚರ್ಮದ ಕಾಂತಿ ಹೆಚ್ಚಿಸುತ್ತವೆ.

* ನಿದ್ರಾಹೀನತೆ ಸಮಸ್ಯೆ ಪರಿಹಾರವಾಗುತ್ತದೆ. ಮೂಲವ್ಯಾಧಿ, ಮಲಬದ್ಧತೆ, ಅಜೀರ್ಣ ಸಮಸ್ಯೆಯುಳ್ಳವರು ಹೆಚ್ಚು ಸೇವಿಸಬಹುದು

* ಮಾವಿನಲ್ಲಿ ನಾರಿನಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದರ ಸೇವನೆಯಿಂದ ಆಸಿಡಿಟಿ ಕೂಡ ಕಡಿಮೆಯಾಗುತ್ತದೆ.

* ಇದರಲ್ಲಿ ವಿಟಮಿನ್‌ ಬಿ6 ಇರುವುದರಿಂದ ಹೃದಯಾಘಾತ ಹಾಗೂ ಲಕ್ವಾ ಆಗದಂತೆ ತಡೆಯುತ್ತದೆ. ಮಿದುಳಿನ ಆರೋಗ್ಯ ಹಾಗೂ ಸ್ಮರಣಶಕ್ತಿ ವೃದ್ಧಿಗೂ ವಿಟಮಿನ್‌ ಬಿ6 ನೆರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಮಾವಿನಲ್ಲಿರುವ ಕಬ್ಬಿಣದ ಅಂಶ ಮಹಿಳೆಯರಲ್ಲಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಕಬ್ಬಿಣ
ಹಾಗೂ ಕ್ಯಾಲ್ಸಿಯಂ ಕೊರತೆ, ಮುಟ್ಟಿನ ಸಮಸ್ಯೆಯುಳ್ಳವರಿಗೆ ಹಾಗೂ ಗರ್ಭಿಣಿಯರಿಗೆ ಮಾವು ಸೇವನೆ ಸಹಕಾರಿ.

* ಸೌಂದರ್ಯವರ್ಧಕವಾಗಿಯೂ ಮಾವು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ವಿಟಮಿನ್‌ ಹಾಗೂ ಆ್ಯಂಟಿಆಕ್ಸಿಡೆಂಟ್‌ ಧಾರಾಳವಾಗಿರುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ.

* ಇದರಲ್ಲಿ ವಿಟಮಿನ್‌ ಸಿ ಮತ್ತು ವಿಟಮಿನ್‌ ಎ ಮುಖದ ಕಲೆ ಹಾಗೂ ಮೊಡವೆಗಳನ್ನು ತೊಲಗಿಸುತ್ತದೆ. ಮಾವಿನಿಂದ ಮಸಾಜ್‌ ಮಾಡಿಸಿಕೊಂಡಲ್ಲಿ ಇದರಲ್ಲಿನ ವಿಟಮಿನ್ ಎ ಚರ್ಮದ ಮೇಲಿನ ತೆರೆದ ರಂಧ್ರಗಳು, ಕಲೆಗಳು ಹಾಗೂ ಮೊಣಕೈ, ಮೊಣಕಾಲಿನ ಕಪ್ಪು ಕಲೆಗಳನ್ನು ತೊಲಗಿಸುತ್ತದೆ.

* ಮಾವಿನ ತಿರುಳು, ಅಕ್ಕಿ ಹಿಟ್ಟು ಮತ್ತು ಜೇನುತುಪ್ಪದ ದಪ್ಪ ಪೇಸ್ಟ್‌ ಮಾಡಿಕೊಂಡು ಮುಖ, ಕೈ, ಕಾಲಿಗೆ ಸ್ಕ್ರಬ್‌ನಂತೆ ಬಳಸಿ. ಮೂರು ದಿನಗಳಿಗೊಮ್ಮೆ ಮಾಡಿದರೆ ಮೈಬಣ್ಣ ತಿಳಿಯಾಗುತ್ತದೆ.

* ಮಾವಿನ ಹಣ್ಣಿನ ತಿರುಳನ್ನು ತೆಗೆದು ಮುಖಕ್ಕೆ ಫೇಷಿಯಲ್‌ ಮಾಡಿ. ಮುಖಕ್ಕೆ ತಾಜಾತನ ನೀಡುತ್ತದೆ. ಕಲೆ ತೊಲಗಿಸಲು ಇದು ಸಹಕಾರಿ. ಮಾವಿನಹಣ್ಣಿನ ರಸ ಕುಡಿಯುವುದರಿಂದ ದೇಹಕ್ಕೆ ಚೈತನ್ಯ ಬರುತ್ತದೆ.

* ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

* ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಹೆಚ್ಚಿರುವುದರಿಂದ ವೃದ್ಧಾಪ್ಯವನ್ನು ಮುಂದೂಡುತ್ತದೆ.

* ಒಣ ತ್ವಚೆ ಅಥವಾ ಎಣ್ಣೆ ಮುಖದವರು ಮಾವಿನ ತಿರುಳನ್ನು ಮುಖಕ್ಕೆ ದಪ್ಪಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ಚರ್ಮ ಮೃದುವಾಗುತ್ತದೆ.

* ಮಾವಿನಲ್ಲಿನ ವಿಟಮಿನ್‌ ಇ ನೆತ್ತಿಯಲ್ಲಿ ರಕ್ತದ ಸಂಚಾರವನ್ನು ಹೆಚ್ಚು ಮಾಡುತ್ತದೆ, ಇದರಿಂದ ಕೂದಲ ಬೆಳವಣಿಗೆಗೆ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT