ಶನಿವಾರ, ಆಗಸ್ಟ್ 8, 2020
23 °C

ಮಾಹಿತಿ, ಚಿತ್ರ ಅಳಿಸಿ ಹಾಕುವುದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ, ಚಿತ್ರ ಅಳಿಸಿ ಹಾಕುವುದು

ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣವು ತನ್ನ ಲಕ್ಷಾಂತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು  ಡೊನಾಲ್ಡ್‌ ಟ್ರಂಪ್ ಅವರಿಗೆ ನೀಡಿತ್ತು ಎಂಬುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಫೇಸ್‌ಬುಕ್‌ ಅಥವಾ ಇನ್ನಿತರ ಸಾಮಾಜಿಕ ಜಾಲತಾಣದ ಖಾತೆ ಡಿಲಿಟ್‌ ಮಾಡಿದರೆ ಹೇಗೆ ಎಂದು ಹಲವರು ಯೋಚಿಸುತ್ತಿದ್ದಾರೆ.

ಹೀಗೆ ಯೋಚಿಸುವ ಬದಲು, ಸಾಮಾಜಿಕ ಜಾಲತಾಣ ಗಳ ಟೈಮ್‌ಲೈನ್‌ನಲ್ಲಿ ಅಷ್ಟೊಂದು ದತ್ತಾಂಶವನ್ನು ಅತಿ ಹೆಚ್ಚು ಪ್ರಾಮುಖ್ಯ ಕೊಟ್ಟು ಏಕೆ ಹಂಚಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಬಳಕೆದಾರರು ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಕೇಳಿಕೊಳ್ಳಬಹುದು. ಫೇಸ್‌ಬುಕ್‌ ಮತ್ತು ಟ್ವೀಟರ್‌ ಖಾತೆಗಳನ್ನು ಆರಂಭಿಸಿದಾಗಿನಿಂದಲೂ ನಿಮ್ಮ ಪೋಸ್ಟ್‌ಗಳು ಶೇಖರಣೆಯಾಗುತ್ತಾ ಇರುತ್ತವೆ. ನೀವು ಹಂಚಿಕೊಂಡ ಕೆಲವು ಹಳೆಯ ನೆನಪುಗಳನ್ನು (ಚಿತ್ರಗಳು, ವಿಡಿಯೊಗಳು ಮತ್ತು ಸಂಭಾಷಣೆಗಳು) ಈ ಜಾಲತಾಣಗಳು ನಿಮಗೆ ನೆನಪಿಸುತ್ತಿರುತ್ತವೆ. ಇದಿಷ್ಟೇ ಅಲ್ಲದೆ, ನಿಮ್ಮ ಮಾಹಿತಿ ಮತ್ತು ನೀವು ಹಂಚಿಕೊಂಡ ಮಾಹಿತಿಯನ್ನು ಇತರರೂ ಸುಲಭವಾಗಿ ನೋಡಬಹುದು. ಆಯಾ ಜಾಲತಾಣಗಳ ಉದ್ಯೋಗಿಗಳೂ ಈ ಮಾಹಿತಿಯನ್ನು ನೋಡಬಹುದು. ಹೀಗಿರುವಾಗ ನೀವೇಕೆ ಎಲ್ಲವನ್ನೂ ಟೈಮ್‌ಲೈನ್‌ನಲ್ಲಿ ಇಟ್ಟುಕೊಳ್ಳುತ್ತೀರಿ?

ಸುಲಭವಾಗಿ ಅಳಿಸಲಾಗದು ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಟೈಮ್‌ಲೈನ್‌ ಪೋಸ್ಟ್‌ಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಎಲ್ಲ ಮಾಹಿತಿಯನ್ನೂ ಒಂದೇ ಸಲಕ್ಕೆ ಡಿಲೀಟ್‌ ಮಾಡಲಾಗದು. ವರ್ಷಗಳಷ್ಟು ಹಿಂದಿನ ಮಾಹಿತಿಯೂ ಹಾಗೆಯೇ ಉಳಿದಿರುತ್ತದೆ.  ಹಾಗಿದ್ದರೆ ಬೇಡವಾದ ಅಥವಾ ತೀರ ಮುಖ್ಯವಲ್ಲದ ಮಾಹಿತಿಯನ್ನು ಆಗಿಂದಾಗ್ಗೆ ಅಳಿಸಿ ಹಾಕಲು ಮಾಡಲು ಎರಡು ಸಾಧನಗಳಿವೆ. ಫೇಸ್‌ಬುಕ್‌ ಖಾತೆ ನಿರ್ವಹಣೆಗೆ ‘ಸೋಷಿಯಲ್ ಮೀಡಿಯಾ ಪೋಸ್ಟ್ ಮ್ಯಾನೇಜರ್’ ಮತ್ತು ಟ್ವೀಟರ್ ಖಾತೆ ನಿರ್ವಹಣೆಗೆ ‘ಟ್ವೀಟ್‌ ಡಿಲೀಟ್‌’ ಎಂಬ ಆ್ಯಪ್‌ಗಳಿವೆ.

ಟ್ವೀಟ್‌ ಡಿಲೀಟ್‌ ಆ್ಯಪ್‌ ಅನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಲ್‌ ಮಾಡಿಕೊಳ್ಳಬೆಕು. ನಂತರ ನಮ್ಮ ಟ್ವೀಟರ್‌ ಖಾತೆ ನಿರ್ವಹಿಸಲು ಅದಕ್ಕೆ ಅನುಮತಿ ನೀಡಬೇಕು. ಒಂದು ವಾರಕ್ಕಿಂತ ಹಳೆಯದಾದ ಟ್ವೀಟ್‌ಗಳನ್ನು ಇದರ ಮೂಲಕ ಡಿಲೀಟ್ ಮಾಡಬಹುದು. ಹಲವು ಟ್ವೀಟ್‌ಗಳನ್ನು ಡಿಲೀಟ್‌ ಮಾಡಲು ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ತಾಂತ್ರಿಕ ಮಿತಿಗಳ ಅನುಸಾರ ಒಂದು ಸಲಕ್ಕೆ ಗರಿಷ್ಠ 3,200 ಟ್ವೀಟ್‌ಗಳನ್ನು ಇದು ಡಿಲೀಟ್ ಮಾಡುತ್ತದೆ.

ಕ್ರೋಮ್‌ ವೆಬ್‌ ಬ್ರೌಸರ್‌ನಲ್ಲಿ ಉಚಿತವಾಗಿ ದೊರಕುವ ‘ಸೋಷಿಯಲ್ ಬುಕ್‌ ಪೋಸ್ಟ್ ಮ್ಯಾನೇಜರ್’ ಆ್ಯಪ್, ಹಳೆಯದಾದ ಟೈಮ್‌ಲೈನ್‌ ಪೋಸ್ಟ್‌ಗಳನ್ನು ನಮ್ಮ ಆಯ್ಕೆಯ ಅನುಸಾರ ಡಿಲೀಟ್ ಮಾಡುತ್ತದೆ. ಡಿಲೀಟ್‌ ಮಾಡುವ ವೇಗವನ್ನು ನಾವು ಹೊಂದಿಸಿಕೊಳ್ಳಬಹುದು. ಕನಿಷ್ಠ ವೇಗ ಸೆಟ್‌ ಮಾಡಿಕೊಳ್ಳುವುದು ಅನುಕೂಲಕರ. ಈ ಆ್ಯಪ್‌ಗಳನ್ನು ಬಳಸಿ ಟೈಮ್‌ಲೈನ್‌ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದರೂ ನಿಮ್ಮ ಸ್ನೇಹಿತರು ನಿಮ್ಮ ಟೈಮ್‌ಲೈನ್‌ಗೆ ಮಾಡಿದ ಪೋಸ್ಟ್‌ಗಳು ಮಾತ್ರ ಹಾಗೆಯೇ ಇರುತ್ತವೆ. ಅವುಗಳನ್ನು ನೀವು ಪೋಸ್ಟ್‌ ಮಾಡಿರುವುದಿಲ್ಲವಾದ್ದರಿಂದ ನಿಮಗೆ ಅವುಗಳನ್ನು ಡಿಲೀಟ್‌ ಮಾಡಲಾಗದು. ಜನರಿಗೆ ತಮ್ಮ ಹಳೆಯ ಬಟ್ಟೆ ಮತ್ತು ಭಾವಚಿತ್ರಗಳ ಕುರಿತು ಇರುವಷ್ಟೇ ಅಭಿಮಾನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನೆನಪುಗಳ ಬಗ್ಗೆಯೂ ಇರುತ್ತದೆ. ಅವುಗಳ ಬಗ್ಗೆ ಅಷ್ಟೇ ಭಾವುಕರಾಗಿರುತ್ತಾರೆ. ಹೀಗಾಗಿ ಖಾತೆ ಡಿಲೀಟ್‌ ಮಾಡುವ ನಿರ್ಧಾರಕ್ಕೆ ಹಲವರು ಬರಲಾರರು ಎನ್ನುವುದು ಅನೇಕರ ವಾದವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.