ಭಾನುವಾರ, ಡಿಸೆಂಬರ್ 15, 2019
20 °C

ಟ್ರೇಲರ್‌ನಲ್ಲೂ ಕಾತರ ಹೆಚ್ಚಿಸಿದ ‘ರಾಝಿ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟ್ರೇಲರ್‌ನಲ್ಲೂ ಕಾತರ ಹೆಚ್ಚಿಸಿದ ‘ರಾಝಿ’

ಮುಂಬೈ: ಬಾಲಿವುಡ್‌ನ ಚಿನಕುರುಳಿ ನಟಿ ಅಲಿಯಾ ಭಟ್‌ ಮತ್ತು ವಿಕ್ಕಿ ಕೌಶಲ್‌ ನಟನೆಯ ‘ರಾಝಿ’ ಬಿಡುಗಡೆಯ ದಿನಕ್ಕಾಗಿ ಕಾಯುವಂತೆ ಮಾಡಿದೆ. ಇದಕ್ಕೆ ಕಾರಣ ಮಂಗಳವಾರ ಬಿಡುಗಡೆಯಾಗಿರುವ ಟ್ರೇಲರ್‌.

ಸೆಹ್ಮತ್‌ ಹೆಸರಿನ ಕಾಶ್ಮೀರಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಅಲಿಯಾ ಮುಖದ ಮುಗ್ಧತೆ, ತಿಳಿನೇರಳೆ ಬಣ್ಣದ ಬುರ್ಖಾದಲ್ಲಿ ಇನ್ನಷ್ಟು ಎದ್ದುಕಾಣುತ್ತಿದೆ. ಪಾಕಿಸ್ತಾನದ ಸೇನಾಧಿಕಾರಿ ಹಾಗೂ ಅಲಿಯಾ ಪತಿಯಾಗಿ ವಿಕ್ಕಿ ಕೌಶಲ್‌ ನಟಿಸಿದ್ದಾರೆ. ಸೆಹ್ಮತ್‌ಳ ಬಾಲ್ಯದಲ್ಲಿ ಹೆತ್ತವರ ಪ್ರೀತಿ ವಾತ್ಸಲ್ಯ, ಮದುವೆ ಮತ್ತು ದಾಂಪತ್ಯ ಮತ್ತು ಗೂಢಚಾರಿಣಿಯಾಗಿ ಬದಲಾಗುವ ಗಂಭೀರ ಪಾತ್ರ ಹೀಗೆ ಮೂರು ಛಾಯೆಗಳಲ್ಲಿ ಅಲಿಯಾ ನಟನೆ ಗಮನಾರ್ಹವಾಗಿದೆ.

ಟ್ರೇಲರ್‌ ಬಿಡುಗಡೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿದ್ದು, ಭಾರಿ ಚರ್ಚೆ ಮತ್ತು ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಅಲಿಯಾ, ಸುಂದರಿಯಷ್ಟೇ ಅಲ್ಲ, ಪ್ರತಿ ಸಿನಿಮಾದಲ್ಲೂ ತಮ್ಮ ನಟನಾ ಕೌಶಲವನ್ನು ಸಾಬೀತುಪಡಿಸುತ್ತಲೇ ಬರುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಡುಗಡೆಯಾಗಿ 8 ಗಂಟೆಗಳಲ್ಲಿ 35 ಲಕ್ಷ ಜನರು ಈ ಟ್ರೇಲರ್‌ ವೀಕ್ಷಣೆ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)