ಬಾಕ್ಸಿಂಗ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ಅಮಿತ್‌, ನಮನ್‌ ತನ್ವರ್

7

ಬಾಕ್ಸಿಂಗ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ಅಮಿತ್‌, ನಮನ್‌ ತನ್ವರ್

Published:
Updated:
ಬಾಕ್ಸಿಂಗ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ಅಮಿತ್‌, ನಮನ್‌ ತನ್ವರ್

ಗೋಲ್ಡ್‌ ಕೋಸ್ಟ್‌: ಭಾರತದ ಅಮಿತ್‌ ಹಾಗೂ ನಮನ್‌ ತನ್ವರ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಬಾಕ್ಸಿಂಗ್‌ನಲ್ಲಿ ಮಂಗಳವಾರ ಸೆಮಿ ಫೈನಲ್‌ ಪ್ರವೇಶಿಸಿದ್ದು, ಪದಕದ ಭವರಸೆ ಮೂಡಿಸಿದ್ದಾರೆ.

ಮಂಗಳವಾರ ನಡೆದ ಪುರುಷರ 49 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಅಮಿತ್‌ 4-0ಯಿಂದ ಸ್ಕಾಟ್ಲೆಂಡ್‌ನ ಅಕ್ವೀಲ್‌ ಅಹಮದ್‌ ಅವರನ್ನು ಸೋಲಿಸಿದರು.

ಪುರುಷರ 91 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನಮನ್‌ ತನ್ವರ್‌ 5–0ಯಿಂದ ಫ್ರಾಂಕ್‌ ಮಸೊಯೆ ಅವರನ್ನು ಸೋಲಿಸಿದರು.

ಈ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 11 ಚಿನ್ನ, 4 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟು 20 ಪದಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry