ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಮಾಹಿತಿ ಸೋರಿಕೆ: ಅಮೆರಿಕ ಸಂಸತ್‌ನಲ್ಲಿ ಜುಕರ್‌ಬರ್ಗ್‌ ಕ್ಷಮೆಯಾಚಿಸಲಿದ್ದಾರೆ?

Last Updated 10 ಏಪ್ರಿಲ್ 2018, 12:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಅಮೆರಿಕ ಸಂಸತ್‌ನಲ್ಲಿ ಕ್ಷಮೆಯಾಚಿಸಲಿದ್ದಾರೆ.

ಈ ಹೇಳಿಕೆ ಬಿಡುಗಡೆ ಮಾಡಿರುವ ಜುಕರ್‌ಬರ್ಗ್‌, ’ನಮ್ಮ ಜವಾಬ್ದಾರಿ ಕುರಿತು ವಿಶಾಲಾವಾದ ದೃಷ್ಟಿಕೋನ ಹೊಂದುವಲ್ಲಿ ವಿಫಲರಾಗಿದ್ದೇವೆ. ಇದು ದೊಡ್ಡ ತಪ್ಪು. ನನ್ನ ತಪ್ಪು ಸಹ ಹೌದು. ನನ್ನನ್ನು ಕ್ಷಮಿಸಿ. ಫೇಸ್‌ಬುಕ್‌ ಅನ್ನು ನಾನೇ ಆರಂಭಿಸಿ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಇಲ್ಲಿ ನಡೆಯುವ ಘಟನೆಗಳಿಗೆ ನಾನು ಜವಾಬ್ದಾರನಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.

ಸಂಸದರ ಮುಂದೆ ಬುಧವಾರ ಹಾಜರಾಗಲಿರುವ ಜುಕರ್‌ಬುರ್ಗ್‌, ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಲಿದ್ದಾರೆ.

ಸೋಮವಾರ ಸೆನೆಟ್‌ ಸಮಿತಿ ನಾಯಕರನ್ನು ಜುಕರ್‌ಬುರ್ಗ್‌ ಖಾಸಗಿಯಾಗಿ ಭೇಟಿಯಾಗಿ ಚರ್ಚಿಸಿದ್ದರು. ಬುಧವಾರ ಇಂಧನ ಮತ್ತು ವಾಣಿಜ್ಯ ಸಮಿತಿ ಮುಂದೆ ಹಾಜರಾಗಿ, ಸುಳ್ಳು ಸುದ್ದಿ ಮತ್ತು ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವ ನಿರೀಕ್ಷೆ ಇದೆ.

ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು ಫೇಸ್‌ಬುಕ್‌ನ ಸುಮಾರು 8.7 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಿದ ಸುದ್ದಿ ಬಹಿರಂಗವಾಗಿತ್ತು. ಬಳಿಕ, ಫೇಸ್‌ಬುಕ್‌ ಟೀಕೆಗೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT