111

7

111

Published:
Updated:

 

ಶಿವರಾತ್ರಿಗೆ ಶಿವ.. ಶಿವಾ... ಎಂಬಂಥಹ ಬಿಸಿಲು ಆರಂಭವಾದಂದಿನಿಂದ ಮುಂಗಾರು ಮಳೆ ಭೂವಿಗೆ ತಂಪೆರೆಯುವಂತೆ ಸುರಿಯುವರೆಗೆ ಬೇಸಗೆಯದ್ದೇ ಕಾರುಬಾರು. ಬೇಸಗೆಯಲ್ಲಿ ಬಿಸಿಲಿನ ಝಳ, ಮುಖ, ಮೈಗೆ ರಾಚುವ ಬಿಸಿ ಗಾಳಿ

 

 

ಬೇಸಗೆ

 

ಕಾಯಿಲೆ ಬರುವ ಮುನ್ನವೇ ದೇಹವನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಾಯಿಲೆಗಳು ಬಾರದಂತೆ ತಡೆಯುವ

* ದೇಹವನ್ನು ಆರೋಗ್ಯವಾಗಿಟ್ಟು, ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬಿ ಎಲ್ಲವನ್ನೂ ಸಾಧ್ಯವಾಗಿಸುವ ಶಕ್ತಿ ಯೋಗಕ್ಕಿದೆ.

* ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ನಿಗ್ರಹಿಸಿದ ಮಾನಸ್ಸು ಹಾಗೂ ‘ಸರ್ವಾಂಗ ಸುಂದರ’ವಾದ ಕಾಯವನ್ನು ಹೊಂದುವುದೇ ಆರೋಗ್ಯ.

ದೀರ್ಘ ಮತ್ತು ಅಡೆ ತಡೆ ರಹಿತವಾಗಿ ನಾಲ್ಕು ಬಾರಿ ನೀಳ ಉಸಿರಾಟ ನಡೆಸಿ.

ನಿಮ್ಮ ನೆಚ್ಚಿನ ಭಗವಂತನಿಗೆ ಮನಸ್ಸಿನಲ್ಲೇ ನಮಿಸಿ ‘ಏ ಭಗವಂತನೆ ನಿನಗೆ ಭಕ್ತಿಪೂರ್ವಕ ಪ್ರಣಾಮಗಳು. ಧ್ಯಾನದಿಂದ ನನ್ನ ದೇಹದ ಆಲಸ್ಯ, ಜಡತ್ವವನ್ನು ದೂರಮಾಡಿ ಚೈತನ್ಯವನ್ನು ತುಂಬು’ ಎಂದು ಪ್ರಾರ್ಥಿಸಿ.

ವಿಶ್ರಾಂತಿ ವಿಶ್ರಾಂತಿ’

ಮನಸ್ಸು ಶಾಂತವಾಗಿ ಏಕಾಗ್ರ ಓದಿಗೆ ಸಹಕಾರಿ, ನೆನಪಿನ ಶಕ್ತಿ ಹೆಚ್ಚಳ. ಮನಸ್ಸು ಮಗುವಿನಂತೆ ವಿರಮಿಸುತ್ತದೆ.

* ದೇಹ, ಮನಸ್ಸಿನ ದ್ವಂದ್ವ ದೂರ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಪೂರಕ.

* ಉಸಿರಾಟ, ಹೃದಯದ ಬಡಿತ, ಶಾರೀರಿಕ ಸ್ವಾಭಾವಿಕ ಕ್ರಿಯೆ ನಿಯಂತ್ರಣ ಸಾಧ್ಯ.

* ಆತಂಕ, ಭಾವೋದ್ವೇಗ, ವಿಕೃತ ಸ್ವಭಾವ ನಿವಾರಣೆ. ದೃಢತೆ, ಆತ್ಮವಿಶ್ವಾಸ ವೃದ್ಧಿ.

* ವ್ಯಕ್ತಿ ಬಂಧನದ ಸ್ಥಿತಿಯಲ್ಲಿ ಧ್ಯಾನ ಆರಂಭಿಸಿ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.

* ವಿಕಸಿತ ಜ್ಞಾನ, ಹೊಸ ಪ್ರಕಾಶ(ಪ್ರಜ್ಞೆ)ವನ್ನು ಗಳಿಸುತ್ತೇವೆ.

'ಆಸನಗಳ ತಾಯಿ' ಎನಿಸಿರುವ ಸರ್ವಾಂಗಾಸನದ ಅಭ್ಯಾಸ

ಉಸಿರಾಟ, ಶ್ವಾಸನಾಳ ತೊಂದರೆ, ಗಂಟಲುಬೇನೆ, ವೇಗವಾದ ಎದೆಬಡಿತ, ಅರ್ಧತಲೆನೋವು ನಿವಾರಣೆ.

ಅಷ್ಟಾಂಗ ಎಂದರೆ ಎಂಟು ವಿಭಾಗ ಅಥವಾ ಸಾಧನೆಯ ಮೆಟ್ಟಿಲುಗಳು ಎಂದರ್ಥ.

ಯಮ: ಇಂದ್ರಿಯ ನಿಗ್ರವಾಗಿದ್ದು, ನೈತಿಕಶಿಸ್ತು ಪಾಲಿಸುವುದು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ(ವಿವಾಹ ಪೂರ್ವ ಬ್ರಹ್ಮಚರ್ಯೆ ಹಾಗೂ ವಿವಾಹ ನಂತರವೂ ಏಕ ಪತ್ನಿ, ಪತಿತ್ವ ಪರಿಪಾಲನೆ), ಅಪರಿಗ್ರಹ ಇಪುಗಳ ಪಾಲನೆಯಾಗಿದೆ.

2) ನಿಯಮ: ಶುಚಿತ್ವ(ಸಮಯಕ್ಕೆ ಸರಿಯಾಗಿ ನಿತ್ಯಕರ್ಮ ಪೂರೈಸಿಕೊಳ್ಳುವುದು, ದೈಹಿಕ ಸ್ವಚ್ಛತೆ ಹಾಗೂ ತನ್ನ ವಾಸ ಸ್ಥಳ ಮತ್ತು ಸುತ್ತಲಿನ ಪರಿಸರದ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದು). ತೃಪ್ತಿ ಹೊಂದುವುದು. ತಪಸ್ಸಿನಲ್ಲಿ ತೊಡಗಿಕೊಳ್ಳುವುದು. ಸ್ವಾಧ್ಯಾಯ(ಅಭ್ಯಾಸ, ಓದು), ಈಶ್ವರಿಪ್ರಾಣಿಧ್ಯಾನ(ಡೆಡಿಕೇಷನ್ ಆಫ್ ಲಾರ್ಡ್, ಭಗವಂತನ ಉಪಾಸನೆ)ಗಳನ್ನು ಒಳಗೊಂಡಿದೆ.

ಪ್ರತ್ಯಾಹಾರ: ಕ್ರಮಬದ್ಧ ಆಹಾರ ಸೇವನೆ. ತಿನ್ನುವುದಕ್ಕಾಗಿ ಬದುಕ ಬೇಡ. ಬದುಕುವುದಕ್ಕಾಗಿ ತಿನ್ನು, ಕಸ ತಿನ್ನುವುದಕ್ಕಿಂತ ತುಸು ತಿನ್ನು, ಶುಚಿ ಮತ್ತು ಬಿಸಿಯಾದದ್ದನ್ನು ಸೇವಿಸು ಎನ್ನುವ ಸೂತ್ರ. ಆಹಾರ ಸೇವಿಸುವ ಪರಿಸರ ಶುಭ್ರವಾಗಿದ್ದು, ಮನಸ್ಸು ಕ್ರೋದ, ತಾಪ, ಮುನಿಸಿನಿಂದ ಕೂಡಿರದೆ ಶಾಂತವಾಗಿರಬೇಕು ಎಂಬಿತ್ಯಾದಿ ಸೂತ್ರಗಳಿವೆ. ಇಂದ್ರಿಯಗಳನ್ನು ವಿಷಯಾಸಕ್ತಿಯಿಂದ ಹಿಂತೆಗೆಯುವುದು.

'ಓಂ' ಏಕಾಕ್ಷರ 'ಸಕಲ ಜ್ಞಾನ' ಎಂದು ಹೇಳಲಾಗಿದೆ. 'ಓಂ'ಕಾರ 'ಅ', 'ಉ', 'ಮ' ಎಂಬ ಮೂರು ಅಕ್ಷರಗಳ ಸಂಯೋಗದಿಂದಾಗಿದೆ. ಇದರ ಉಚ್ಚಾರಣೆಯಿಂದ ಹಲವು ಲಾಭಗಳಿವೆ.

ದಂಡನೆಗೆ ಒಳಗಾದ ದೇಹದಲ್ಲಿ ಮನಸ್ಸು ನೆಲೆಗೊಳ್ಳುತ್ತದೆ. ಆದ್ದರಿಂದ, ಆಸನ ಅಭ್ಯಾಸದಲ್ಲಿ ದೇಹ ದಂಡನೆಯಾಗುವಾಗ ಅವಯವಗಳ ಚಲನೆ, ಅವುಗಳು ಸೆಳೆಯಲ್ಪುಡುವ ರೀತಿ, ಪ್ರಮಾಣ, ವೇಗ, ಅವುಗಳಿಗೆ ಆಗುವ ಶ್ರಮ, ದೊರೆಯುವ ವಿಶ್ರಾಂತಿ ಹಾಗೂ ತಪ್ಪು ಕ್ರಮಗಳಿಂದ ಆಗುವ ತೊಂದರೆಗಳನ್ನು ಗಮನಿಸುತ್ತಾ ಸಾಗಬೇಕು.

ಆಸನಗಳ ಅಭ್ಯಾಸ ವೇಳೆ ಕ್ರಮಬದ್ಧ ಉಸಿರಾಟ ಪ್ರಕ್ರಿಯೆ ನಡೆಯಬೆಕಾದದ್ದು ಅತಿ ಮುಖ್ಯ. ಕೆಲ ಆಸನಗಳು ಸರಳವಾದ ಉಸಿರಾಟಕ್ಕೆ ನೆರವಾಗುತ್ತವೆ. ಇನ್ನೂ ಕೆಲ ಆಸನಗಳು ವೇಗವಾದ ಉಸಿರಾಟವನ್ನು ಉಂಟು ಮಾಡುತ್ತವೆ. ಉಸಿರಾಟ ಪ್ರಕ್ರಿಯೆಯು ಆಸನಗಳ ಕ್ಲಿಷ್ಟತೆಯನ್ನು ಅವಲಂಬಿಸಿರುತ್ತದೆ. ಉಸಿರನ್ನು ಬಿಗಿ ಹಿಡಿದು ಅಭ್ಯಾಸ ನಡೆಸಿದರೆ ಮೆದುಳಿಗೆ ಒತ್ತಡ ಉಂಟಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು.

ಹೀಗೆ ಮಾಡಿ

* ಯಾವುದೇ ಕಾರಣಕ್ಕೂ ಉಸಿರನ್ನು ಬಿಗಿ ಹಿಡಿದು ಅಭ್ಯಾಸ ನಡೆಸಬೇಡಿ

* ಆಸನಾಭ್ಯಾಸ ವೇಳೆ ಮೂಗಿನ ಹೊರಳೆ ಮೂಲಕವೇ ಉಸಿರಾಡಿ, ಬಾಯಿಯ ಮೂಲಕ ನಡೆಸಕೂಡದು

* ದೇಹ ಮುಂದೆ ಬಾಗುವಾಗ ಶ್ವಾಸವನ್ನು ಹೊರ ಹಾಕಿ

* ಮುಂದೆ ಬಾಗಿದ್ದ ಸ್ಥಿತಿಯಿಂದ ಹಿಂದಿರುಗುವಾಗ ಶ್ವಾಸವನ್ನು ತೆಗೆದುಕೊಳ್ಳಿ

* ದೇಹ ಹಿಂದೆ ಬಾಗುವಾಗ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ

* ಹಿಂದೆ ಬಾಗಿದ್ದ ಸ್ಥಿತಿಯಿಂದ ಹಿಂದಿರುಗುವಾಗ ಶ್ವಾಸವನ್ನು ಹೊರಹಾಕಿ

* ಆಸನಗಳ ಅಂತಿಮ ಸ್ಥಿತಿಯಲ್ಲಿ ಸರಳವಾದ ಉಸಿರಾಟ ನಡೆಸುತ್ತಿರಿ

* ದೀರ್ಘವಾದ ಉಸಿರಾಟ ಪ್ರಕ್ರಿಯೆ ರೂಢಿಸಿಕೊಳ್ಳಿ. ದೀರ್ಘ ಉಸಿರಾಟದಿಂದ ದೇಹಕ್ಕೆ ವಿಶ್ರಾಂತಿ ಲಭಿಸುತ್ತದೆ

* ಪ್ರತಿ ಆಸನದ ಅಭ್ಯಾಸ ಮುಗಿದ ಬಳಿಕ ಎಷ್ಟು ಸಾಧ್ಯವೊ ಅಷ್ಟು ದೀರ್ಘವಾದ ಉಸಿರನ್ನು ತೆಗೆದುಕೊಳಿ. ಅಷ್ಟೇ ನಿಧಾನವಾಗಿ ಹೊರ ಹಾಕಿ. ಆಗ ಶ್ರಮಗೊಂಡ ಅವಯವಗಳಿಗೆ ವಿಶ್ರಾಂತಿ ಲಭಿಸುತ್ತದೆ

ಮನಸ್ಸು ತಿಕ್ಕಾಟಕ್ಕೊಳಗಾಗದೆ, ಚಂಚಲವಾಗದೆ ತನ್ನ ಕ್ರಿಯೆಯಲ್ಲಿಯೇ ಏಕಾಗ್ರವಾಗಿರುವ ಸ್ಥಿತಿಯಿಂದ ಮುಂದುವರಿದು, ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರೇಪಿಸುತ್ತದೆ. ಇದೇ ಸ್ಥಿತಿ ಹೆಚ್ಚು ಸಮುಯ ಮುಂದುವರಿದರೆ ಅದೇ ಧ್ಯಾನ.

ಪ್ರಾಣಾಯಾಮ: ಪ್ರಾಣ = ಜೀವ ಚೈತನ್ಯ, ಆಯಾಮ = ವೃದ್ಧಿಸು, ಹೆಚ್ಚಿಸು. ಕ್ರಮಬದ್ಧ ಉಸಿರಾಟ ಪ್ರಕ್ರಿಯೆ ಮೂಲಕ 'ಪ್ರಾಣವಾಯು'ವನ್ನು ಪಡೆದು ಜೀವಿತಾವಧಿಯನ್ನು ಹೆಚ್ಚಿಸುವುದೇ ಆಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry