ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಯೊಳಗಿನ ಕಪ್ಪೆ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಆನೋ ಭದ್ರೋ ಋತವೋ ಯಾಂತು ವಿಶ್ವತಃ’ ಇದು ವೇದಗಳಲ್ಲಿ ಬರುವ ಒಂದು ಉಕ್ತಿ. ಇದರ ಅರ್ಥ ‘ವಿಶ್ವದ ಎಲ್ಲ ದಿಕ್ಕುಗಳಿಂದ ಒಳ್ಳೆಯ ವಿಚಾರಗಳು ನನ್ನಲ್ಲಿ ಬರಲಿ’ ಎಂದು. ಇದು ಒಬ್ಬ ಧೀರನ ಬಯಕೆ.

ಇನ್ನೊಂದು ಕಾವ್ಯದಲ್ಲಿ ‘ಸ್ವಧರ್ಮಂ ನಿಧನಂ ಶ್ರೇಯಾತ್ ಪರಧರ್ಮಂ ಭಯಾವಹಃ’ ಎಂದು ಹೇಳಲಾಗಿದೆ. ಇದರ ಅರ್ಥ ಸ್ವಧರ್ಮದಲ್ಲಿ ಸತ್ತರೂ ಶ್ರೇಯಸ್ಸು, ಪರ ಧರ್ಮವು ಭಯವುಂಟು ಮಾಡುವಂಥದ್ದು ಎಂದು.

ಇದು, ಬಾವಿಯೊಳಗಿರುವ ಕಪ್ಪೆಯೊಂದು ‘ತನ್ನ ಬಾವಿಯೇ ವಿಶಾಲವಾದದ್ದು, ಇದಕ್ಕಿಂತ ಉತ್ತಮವಾದದ್ದು ಎಲ್ಲೂ ಇಲ್ಲ. ಬೇರೆಡೆ ಏನೇನು ಕಷ್ಟ ಬರುತ್ತವೆಯೋ’ ಎಂದು ಹೆದರಿ ಅದರ ಬಾವಿಯೊಳಗೆ ಅಡಗಿ ಕುಳಿತುಕೊಳ್ಳುವ ಭಾವ.

ಈ ಉದಾಹರಣೆಯನ್ನು ವಿವೇಕಾನಂದರು ತಮ್ಮ ವಿಶ್ವವಿಖ್ಯಾತ ಚಿಕಾಗೊದಲ್ಲಿ ಮಾಡಿದ ಉಪನ್ಯಾಸಲ್ಲಿ ಕೊಡುತ್ತಾರೆ.

ಈಗ ನಮ್ಮ ದಾರಿ ಸರ್ವಧರ್ಮ ಸಮಭಾವದಲ್ಲಿ ನೋಡುವ ಧೀರನದ್ದೋ ಅಥವಾ ಕೂಪ ಮಂಡೂಕ ಹೇಡಿ ಧರ್ಮಾಂಧನದ್ದೋ. ಆಯ್ಕೆ ನಿಮಗೆ ಬಿಟ್ಟಿದ್ದು.

-ಎ.ಎ.ಎನ್. ಸ್ವಾಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT