ವರವಲ್ಲ, ಶಾಪ...

7

ವರವಲ್ಲ, ಶಾಪ...

Published:
Updated:

ರಾಜಕೀಯ ಮುಖಂಡರು, ಕಾವಿಧಾರಿಗಳು, ಅಧಿಕಾರಿಗಳು, ಕವಿಗಳು ಸಾಹಿತಿಗಳು, ಕಲಾಕಾರರು, ನಾಟಕಕಾರರು, ಶಿಲ್ಪಿಗಳು, ಮಾಧ್ಯಮದವರು, ಕ್ರೀಡಾಪಟುಗಳು, ಢೋಂಗಿ ಬಾಬಾಗಳು, ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಯವರು... ಇಂಥವರ ಪ್ರಭಾವಕ್ಕೆ ಒಳಗಾಗಿ ರೂಪಿಸಲಾಗುವ ನೀತಿ, ಕಾನೂನುಗಳೆಲ್ಲವೂ ಶ್ರೀಮಂತ, ಅತಿ ಶ್ರೀಮಂತರ ಪರವಾಗಿಯೇ ಇರುತ್ತವೆ. ಇವು ಜನರಿಗೆ ವರವಲ್ಲ, ಶಾಪ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ನೀತಿಗಳನ್ನು ನಕಲು ಮಾಡಿದರೆ, ಕಾಂಗ್ರೆಸ್ ಪಕ್ಷವು ಎನ್‌ಡಿಎ ಸರ್ಕಾರದ ಕೋಮುವಾದಿ ನೀತಿಯನ್ನು ಹತ್ತಿಕ್ಕುವುದರ ಬದಲು, ತಾನೇ ಕೋಮುವಾದಿ ಧೋರಣೆ ತಳೆಯುತ್ತಿದೆ. ಈ ಎರಡು ಪಕ್ಷಗಳಿಂದ ಕನ್ನಡ ನಾಡು ಮತ್ತು ನಮ್ಮ ದೇಶದ ನೆಮ್ಮದಿ ಕದಡುತ್ತಿರುವುದು ವಿಪರ್ಯಾಸ.

ಚುನಾವಣೆಗಳಲ್ಲಿ ಈವರೆಗೆ ಗೆದ್ದು ಬಂದಿರುವ ಯಾವ ಸರ್ಕಾರವೂ ಸರಿಯಾದ ಭಾಷಾ ನೀತಿಯನ್ನು ರೂಪಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಕೊಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉದ್ಯೋಗ ಕೊಡಲಿಲ್ಲ. ಹಾಗಾದರೆ ದೇಶದಲ್ಲಿ ಇರುವುದು ಅಸಮರ್ಥ ಸರ್ಕಾರವೇ? ಹಾಗೆ ಅನ್ನದೆ ಬೇರೆ ದಾರಿ ಇಲ್ಲ!

-ಸಿದ್ರಾಮ, ಕೆ.ಟಿ. ಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry