ಭಾನುವಾರ, ಡಿಸೆಂಬರ್ 15, 2019
23 °C

ಪೋರನ ನಾಲಿಗೆ ಮೇಲೆ 224 ಕ್ಷೇತ್ರಗಳ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರನ ನಾಲಿಗೆ ಮೇಲೆ 224 ಕ್ಷೇತ್ರಗಳ ಹೆಸರು

ಶಿವಮೊಗ್ಗ: ಒಂದನೇ ತರಗತಿಯ ಈ ಪೋರ ಎರಡು ನಿಮಿಷಗಳಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಪಟಪಟನೆ ಹೇಳುತ್ತಾನೆ.

ಈತನ ಹೆಸರು ಇಂದ್ರಜಿತ್. ವಿನೋಬ ನಗರ ಬಡಾವಣೆಯ ಆಶಾ, ಎಂ.ಕೆ ಶಿವಕುಮಾರ್ ದಂಪತಿ ಪುತ್ರ. ರಾಯಲ್ ಡೈಮಂಡ್ ಶಾಲೆಯಲ್ಲಿ ಓದುತ್ತಿರುವ ಈತ, ವಿಧಾನಸಭಾ ಕ್ಷೇತ್ರ ಸಂಖ್ಯೆ 1ರಿಂದ (ನಿಪ್ಪಾಣಿ) ಆರಂಭಿಸಿ, 224ನೇ ಕ್ಷೇತ್ರವಾದ ಗುಂಡ್ಲುಪೇಟೆಯವರೆಗೆ ಕ್ರಮ

ಬದ್ಧವಾಗಿ ತಪ್ಪಿಲ್ಲದಂತೆ ಹೇಳುತ್ತಾನೆ.

‘ಕೆಲವು ತಿಂಗಳಿನಿಂದ ನನ್ನ ಮಗನಿಗೆ ವಿಧಾನಸಭಾ ಕ್ಷೇತ್ರಗಳ ಹೆಸರು ಕಲಿಸಲು ಆರಂಭಿಸಿದೆ. ಉತ್ಸಾಹದಿಂದ ಎಲ್ಲಾ ಕ್ಷೇತ್ರಗಳ ಹೆಸರನ್ನು ಕಂಠಪಾಠ ಮಾಡಿದ್ದಾನೆ. ಆತನ ಮೇಲೆ ನಾವು ಯಾವುದೇ ಒತ್ತಡ ಹೇರಿಲ್ಲ. ಆತನಿಂದ ಸ್ಫೂರ್ತಿ ಪಡೆದು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಬೇಕು’ ಎನ್ನುತ್ತಾರೆ ಕೋಣೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೂ ಆಗಿರುವ ಬಾಲಕನ ತಂದೆ ಶಿವಕುಮಾರ್.

ಈ ಬಾಲಕನ ವಿಡಿಯೊವನ್ನು ಜಿಲ್ಲಾಡಳಿತದ ಫೇಸ್‌ಬುಕ್‌ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)