ಶನಿವಾರ, ಡಿಸೆಂಬರ್ 14, 2019
20 °C
22 ಸ್ಥಳಗಳಲ್ಲಿ ಶೋಧಿಸುತ್ತಿರುವ ಎಸಿಬಿ ಪೊಲೀಸರು

ಆರು ಅಧಿಕಾರಿಗಳ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ಅಧಿಕಾರಿಗಳ ಮೇಲೆ ದಾಳಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ‍‍ ಪೊಲೀಸರು, ಕೆಪಿಟಿಸಿಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ ಎನ್. ಸವಣೂರ (ಹುಬ್ಬಳ್ಳಿ) ಒಳಗೊಂಡಂತೆ ಆರು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

ವಿಶ್ವಾಸಾರ್ಹ ಮಾಹಿತಿ ಆಧರಿಸಿ ಸವಣೂರ ಅವರ ಹುಬ್ಬಳ್ಳಿಯ ಶಿರೂರ ಪಾರ್ಕಿನ ವಾಸದ ಮನೆ ಸೇರಿ ಮೂರು ಮನೆ, ಅಂಗಡಿ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಅಲ್ಲದೆ, ಆರು ಅಧಿಕಾರಿಗಳಿಗೆ ಸಂಬಂಧಿಸಿದ 22 ಸ್ಥಳಗಳಲ್ಲೂ ಶೋಧಿಸಲಾಗುತ್ತಿದ್ದು, ಆಸ್ತಿಪಾಸ್ತಿಯ ದಾಖಲೆ ಪತ್ರಗಳನ್ನು ‍‍ಪರಿಶೀಲಿಸಲಾಗುತ್ತಿದೆ. ಈ ಅಧಿಕಾರಿಗಳ ಹೆಸರನ್ನು ಎಸಿಬಿ ಬಿಡುಗಡೆ ಮಾಡಿದೆ.

ಪ್ರತಿಕ್ರಿಯಿಸಿ (+)