ಐಸಿಎಂಆರ್‌, ಡಿಬಿಟಿಗೆ ನೇಮಕ

7

ಐಸಿಎಂಆರ್‌, ಡಿಬಿಟಿಗೆ ನೇಮಕ

Published:
Updated:

ನವದೆಹಲಿ: ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ (ಡಿಬಿಟಿ) ಕೇಂದ್ರ ಸರ್ಕಾರ ಮಂಗಳವಾರ ಹೊಸ ಮುಖ್ಯಸ್ಥರನ್ನು ನೇಮಕ ಮಾಡಿದೆ.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಹೃದಯತಜ್ಞ ಡಾ. ಬಲರಾಮ್‌ ಭಾರ್ಗವ ಅವರನ್ನು ಐಸಿಎಂಆರ್‌ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸೌಮ್ಯಾ ಸ್ವಾಮಿನಾಥನ್‌ ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯಎಚ್ಒ) ನಿಯೋಜನೆಗೊಂಡ ನಂತರ ಈ ಹುದ್ದೆ ತೆರವಾಗಿತ್ತು.

ಸಸ್ಯ ತಳಿಶಾಸ್ತ್ರಜ್ಞೆ ಡಾ. ರೇಣು ಸ್ವರೂಪ್‌ ಅವರನ್ನು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಮಂಜು ಶರ್ಮಾ ನಂತರ ಜೈವಿಕ ತಂತ್ರಜ್ಞಾನ ಇಲಾಖೆಯ ಎರಡನೇ ಮಹಿಳಾ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry