4ನೇ ದಿನವೂ ಸೂಚ್ಯಂಕ ಏರಿಕೆ

7

4ನೇ ದಿನವೂ ಸೂಚ್ಯಂಕ ಏರಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ) ಮಂಗಳವಾರ 92 ಅಂಶ ಹೆಚ್ಚಾಗಿ 33,880 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 23 ಅಂಶ ಹೆಚ್ಚಾಗಿ 10,402 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.

ಜಾಗತಿಕ ವಾಣಿಜ್ಯ ಸಮರ ಕಡಿಮೆ ಆಗುವ ಲಕ್ಷಣಗಳು ಕಂಡುಬರುತ್ತಿವೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅಮೆರಿಕದ ಸರಕುಗಳ ಮೇಲಿನ ಆಮದು ಸುಂಕ ತಗ್ಗಿಸುವುದಾಗಿ ಹೇಳಿಕೆ ನೀಡಿದ್ದು, ವಿದೇಶಿ ಕಂಪನಿಗಳ ಭೌತಿಕ ಸಂಪತ್ತು ಹಿತರಕ್ಷಣೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ಈ ಸುದ್ದಿಯಿಂದ ವಹಿವಾಟು ಏರುಮುಖವಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ದೇಶಿ ಮಾರುಕಟ್ಟೆಯಲ್ಲಿ, ಪ್ರಮುಖ ಕಂಪನಿಗಳ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಸಾಧನೆ ಉತ್ತಮವಾಗಿರುವ ನಿರೀಕ್ಷೆ ಮಾಡಲಾಗಿದೆ. ಚಿಲ್ಲರೆ ಹಣದುಬ್ಬರವೂ ಮಾರ್ಚ್‌ನಲ್ಲಿ ಶೇ 4.4ಕ್ಕೆ ಇಳಿಕೆ ಕಾಣುವ ನಿರೀಕ್ಷೆ ಇದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ತಿಳಿಸಿದ್ದಾರೆ.

ದ್ವಾರ್ಕೀಶ್‌ ಷುಗರ್‌, ಬಜಾಜ್‌ ಹಿಂದುಸ್ತಾನ್‌ ಷುಗರ್‌, ಬಲರಾಮ್‌ಪುರ್ ಚಿನಿ, ಮವಾನಾ ಷುಗರ್ ಮತ್ತು ಉತ್ತಮ್ ಷುಗರ್‌ ಕಂಪನಿ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿ ಶೇ 9.53ರವರೆಗೂ ಏರಿಕೆ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry