ಏರ್‌ ಇಂಡಿಯಾ ಸ್ವಾಧೀನ ಹಿಂದೆ ಸರಿದ ಜೆಟ್‌ ಏರ್‌ವೇಸ್‌

ಭಾನುವಾರ, ಮಾರ್ಚ್ 24, 2019
34 °C

ಏರ್‌ ಇಂಡಿಯಾ ಸ್ವಾಧೀನ ಹಿಂದೆ ಸರಿದ ಜೆಟ್‌ ಏರ್‌ವೇಸ್‌

Published:
Updated:
ಏರ್‌ ಇಂಡಿಯಾ ಸ್ವಾಧೀನ ಹಿಂದೆ ಸರಿದ ಜೆಟ್‌ ಏರ್‌ವೇಸ್‌

ನವದೆಹಲಿ: ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎ.ಐ) ಷೇರುವಿಕ್ರಯ ಪ್ರಕ್ರಿಯೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಜೆಟ್‌ ಏರ್‌ವೇಸ್‌ ತಿಳಿಸಿದೆ.

‘ಎ.ಐ’ನ ಅಂತರರಾಷ್ಟ್ರೀಯ ವಿಮಾನ ಸೇವೆ ಮತ್ತು ಅಗ್ಗದ ವಿಮಾನಯಾನ ಸೇವೆಯ ಅಂಗಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಖರೀದಿಸಲು ಮೊದಲಿನಿಂದಲೂ ಆಸಕ್ತಿ ತೋರಿಸಿದ್ದ ದೇಶಿ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಈಗಾಗಲೇ ಈ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ.

ನರೇಶ್‌ ಗೋಯಲ್‌ ನೇತೃತ್ವದಲ್ಲಿನ ಜೆಟ್‌ ಏರ್‌ವೇಸ್‌ ಮತ್ತು ಏರ್‌ ಫ್ರಾನ್ಸ್‌ ಕೆಎಲ್‌ಎಂ, ಡೆಲ್ಟಾ ಏರ್‌ಲೈನ್ಸ್‌ ಒಳಗೊಂಡ ಒಕ್ಕೂಟವು, ‘ಎ.ಐ’ ಸ್ವಾಧೀನಕ್ಕೆ ಈ ಮೊದಲು ಒಲವು ವ್ಯಕ್ತಪಡಿಸಿದ್ದವು.

‘ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ, ಖಾಸಗೀಕರಣಕ್ಕೆ ಸರ್ಕಾರ ನಿಗದಿಪಡಿಸಿರುವ ನಿಬಂಧನೆಗಳ ಕಾರಣಕ್ಕೆ ನಾವು ಹಿಂದೆ ಸರಿಯುತ್ತಿದ್ದೇವೆ’ ಎಂದು ಜೆಟ್‌ ಏರ್‌ವೇಸ್‌ನ ಡೆಪ್ಯುಟಿ ಸಿಇಒ ಅಮಿತ್‌ ಅಗರ್‌ವಾಲ್‌ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry