ಮಂಗಳವಾರ, ಜೂಲೈ 7, 2020
24 °C

ಮಾಹಿತಿ ಸೋರಿಕೆಗೆ ನಾನೇ ಹೊಣೆ: ಮಾರ್ಕ್‌ ಝುಕರ್‌ಬರ್ಗ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಾಹಿತಿ ಸೋರಿಕೆಗೆ ನಾನೇ ಹೊಣೆ: ಮಾರ್ಕ್‌ ಝುಕರ್‌ಬರ್ಗ್‌

ವಾಷಿಂಗ್ಟನ್‌: ‘ಮಾಹಿತಿ ಸೋರಿಕೆಗೆ ನಾನೇ ಹೊಣೆ’ ಎಂದು ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಝುಕರ್‌ಬರ್ಗ್‌ ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.

ವೈಯಕ್ತಿಕ ಮಾಹಿತಿ ಕಳ್ಳತನ ಮತ್ತು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಲವು ದೇಶಗಳು ಹಸ್ತಕ್ಷೇಪ ಮಾಡಿರುವ ಬಗ್ಗೆ ವಿವರಣೆ ನೀಡಲು ಅಮೆರಿಕ ಸಂಸದರ ಮುಂದೆ ಝುಕರ್‌ಬರ್ಗ್‌ ಹಾಜರಾಗಲಿದ್ದಾರೆ.

ಈ ಬಗ್ಗೆ ಅವರು ಸಿದ್ಧಪಡಿಸಿರುವ ಹೇಳಿಕೆಯನ್ನು ಇಂಧನ ಮತ್ತು ವಾಣಿಜ್ಯ ಸಮಿತಿ ಬಿಡುಗಡೆ ಮಾಡಿದೆ.

‘ನಮ್ಮ ಜವಾಬ್ದಾರಿ ಕುರಿತು ವಿಶಾಲ ದೃಷ್ಟಿಹೊಂದುವಲ್ಲಿ ವಿಫಲರಾಗಿದ್ದೇವೆ. ಇದು ದೊಡ್ಡ ತಪ್ಪು. ಇದರಲ್ಲಿ ನನ್ನ ತಪ್ಪು ಸಹ ಇದೆ. ನನ್ನನ್ನು ಕ್ಷಮಿಸಿ. ಫೇಸ್‌ಬುಕ್‌ ಅನ್ನು ನಾನೇ ಆರಂಭಿಸಿ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಇಲ್ಲಿ ನಡೆಯುವ ಘಟನೆಗಳಿಗೆ ನಾನೇ ಹೊಣೆ’ ಎಂದು ಝುಕರ್‌ಬುರ್ಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.