ಕಾರಿನಲ್ಲಿ ಸಾಗಿಸುತ್ತಿದ್ದ ₹42 ಲಕ್ಷ ವಶ

7

ಕಾರಿನಲ್ಲಿ ಸಾಗಿಸುತ್ತಿದ್ದ ₹42 ಲಕ್ಷ ವಶ

Published:
Updated:
ಕಾರಿನಲ್ಲಿ ಸಾಗಿಸುತ್ತಿದ್ದ ₹42 ಲಕ್ಷ ವಶ

ಬೆಂಗಳೂರು: ನಗರದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಬಳಿ ಜನಾರ್ದನರೆಡ್ಡಿ ಎಂಬುವರು ಕಾರಿನಲ್ಲಿ ಸಾಗಿಸುತ್ತಿದ್ದ ₹42.40 ಲಕ್ಷ ನಗದನ್ನು ಚುನಾವಣಾ ಆಯೋಗದ ಸಂಚಾರಿ ದಳವು ಮಂಗಳವಾರ ವಶಪಡಿಸಿಕೊಂಡಿದೆ.

‘ಕೋಣನಕುಂಟೆ ಕ್ರಾಸ್‌ ನಲ್ಲಿರುವ ಮಾನಸ ಚಿತ್ರ ಮಂದಿರದ ಮಾಲೀಕರಾದ ಅವರು, ಜಯನಗರದಲ್ಲಿರುವ ತಮ್ಮ ಮನೆಗೆ

ಹಣ ಸಾಗಿಸುತ್ತಿದ್ದರು. ಈ ಹಣಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ, ಅದನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸಂಚಾರಿ ದಳದ ಕಾರ್ಯನಿರ್ವಹಕ ಮ್ಯಾಜಿಸ್ಟ್ರೇಟ್‌ ನಿರಂಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry