ಮಣಿಕಾ ಬಾತ್ರಾಗೆ ನಗದು ಬಹುಮಾನ

7
ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಘೋಷಣೆ

ಮಣಿಕಾ ಬಾತ್ರಾಗೆ ನಗದು ಬಹುಮಾನ

Published:
Updated:
ಮಣಿಕಾ ಬಾತ್ರಾಗೆ ನಗದು ಬಹುಮಾನ

ನವದೆಹಲಿ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ ಭಾರತದ ಮಹಿಳಾ ಟೇಬಲ್‌ ಟೆನಿಸ್‌ ತಂಡದ ಗೆಲುವಿನ ರೂವಾರಿ ಮಣಿಕಾ ಬಾತ್ರಾಗೆ ದೆಹಲಿ ಸರ್ಕಾರ ₹ 14 ಲಕ್ಷ ನಗದು ಬಹುಮಾನ ಪ್ರಕಟಿಸಿದೆ.

ಈ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರು ಬಹುಮಾನ ಘೋಷಿಸಿದರು.

‘ಸರ್ಕಾರದ ಕ್ರೀಡಾ ನಿಯಮಗಳ ಅನ್ವಯ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಗೆದ್ದವರಿಗೆ ₹14 ಲಕ್ಷ, ಬೆಳ್ಳಿಯ ಸಾಧನೆ ಮಾಡಿವರಿಗೆ ₹ 10 ಲಕ್ಷ ಹಾಗೂ ಕಂಚಿನ ಪದಕ ಪಡೆದವರಿಗೆ ₹ 6 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry