ಪ್ಯಾರಾ ಸ್ಪೋರ್ಟ್ಸ್‌: ಸಚಿನ್‌ಗೆ ಕಂಚು

7
ಉದ್ದೀಪನ ಮದ್ದು ಸೇವಿಸಿದ ಆರೋಪಕ್ಕೆ ಸಿಲುಕಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಕ್ರೀಡಾಪಟು

ಪ್ಯಾರಾ ಸ್ಪೋರ್ಟ್ಸ್‌: ಸಚಿನ್‌ಗೆ ಕಂಚು

Published:
Updated:

ಗೋಲ್ಡ್‌ ಕೋಸ್ಟ್‌: ಭಾರತದ ಪ್ಯಾರಾ ಪವರ್‌ಲಿಫ್ಟರ್‌ ಸಚಿನ್‌ ಚೌಧರಿ ಕಾಮನ್‌ವೆಲ್ತ್‌ ಕ್ರೀಡಾಕೂಟದ ಭಾಗವಾಗಿ ನಡೆಯುತ್ತಿರುವ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಮಂಗಳವಾರ ಕಂಚು ಗೆದ್ದರು.

ಹತ್ತು ಮಂದಿ ಇದ್ದ ಸ್ಪರ್ಧೆಯಲ್ಲಿ ಚೌಧರಿ ಒಟ್ಟು 181 ಕೆ.ಜಿ ಭಾರ ಎತ್ತಿದರು. ನೈಜೀರಿಯಾದ ಅಬ್ದುಲ್ ಅಜೀಜ್‌ ಇಬ್ರಾಹಿಂ 191.9 ಕೆ.ಜಿ ಭಾರ ಎತ್ತಿ ಚಿನ್ನ ಗೆದ್ದರೆ ಮಲೇಷ್ಯಾದ ಯೀ ಕೀ ಜಾಂಗ್‌ (188.7 ಕೆ.ಜಿ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 200 ಕೆ.ಜಿ ಭಾರ ಎತ್ತಿದ ಚೌಧರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. 2012ರ ಪ್ಯಾರಾಲಿಂಪಿಕ್ಸ್‌ನಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದರು.

ಕಳೆದ ಬಾರಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕೂಟದ ಸಂದರ್ಭದಲ್ಲಿ ತಂದೆಯ ಅನಾರೋಗ್ಯದ ಕಾರಣ ಅವರು ಅರ್ಧದಿಂದಲೇ ವಾಪಸಾಗಿದ್ದರು. ನಂತರ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ಆರೋಪಕ್ಕೆ ಒಳಗಾಗಿ ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.

‘ಕಾಮನ್‌ವೆಲ್ತ್‌ ಕ್ರೀಡಾಕೂಟ ಎಂದರೆ ಭಾರತೀಯರಿಗೆ ರೋಮಾಂಚನ. ಇಂಥ ಕೂಟದಲ್ಲಿ ಪದಕ ಗೆಲ್ಲಲು ಸಾಧ್ಯವಾದದ್ದು ಸಂತಸ ತಂದಿದೆ. ಇದು ನನ್ನ ವೃತ್ತಿ ಜೀವನಕ್ಕೆ ತಿರುವು ನೀಡುವ ಭರವಸೆ ಮೂಡಿಸಿದೆ’ ಎಂದು ಸಚಿನ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry