ಶುಕ್ರವಾರ, ಡಿಸೆಂಬರ್ 6, 2019
26 °C

ಜಮ್ಮು ಕಾಶ್ಮೀರ:ಉಗ್ರರ ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮ, ಇಬ್ಬರಿಗೆ ಗಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಮ್ಮು ಕಾಶ್ಮೀರ:ಉಗ್ರರ ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮ, ಇಬ್ಬರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಘಾಮ್ ವಲಯದಲ್ಲಿ ಭದ್ರತಾಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಕುಲ್ಘಾಮ್ ಜಿಲ್ಲೆಯ ಕುದ್ವಾನಿ ಎಂಬಲ್ಲಿ ಭದ್ರತಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. ಈ ವೇಳೆ ಇಬ್ಬರು ಅಥವಾ ಮೂವರು ಉಗ್ರರು ಸೆರೆಸಿಕ್ಕಿದ್ದಾರೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಎನ್‌ಕೌಂಟರ್ ಸ್ಥಳಕ್ಕೆ ತೆರಳಿದ ಹೆಚ್ಚಿನ ಆರು ಸಿಆರ್‌ಪಿಎಫ್ ಪಡೆ ಕಾರ್ಯಾಚರಣೆ ಮುಂದುವರೆಸಿದೆ.

ಈ ಘಟನಾ ಸಂಬಂಧ ಕುಲ್ಘಾಮ್ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಯನ್ನು ಕಡಿತಗೊಳಿಸಲಾಗಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರ–ಬನಿಹಾಳ್ ನಡುವಿನ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶ್ರೀನಗರ–ಬರಮುಲ್ಲಾ ನಡುವಿನ ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ. 

ಪ್ರತಿಕ್ರಿಯಿಸಿ (+)