ಶುಕ್ರವಾರ, ಡಿಸೆಂಬರ್ 6, 2019
26 °C

50 ಮೀ. ಶೂಟಿಂಗ್‌: ಕಂಚು ಗೆದ್ದ ಓಂ ಪ್ರಕಾಶ್‌ ಮಿಥರ್ವಾಲ್

Published:
Updated:
50 ಮೀ. ಶೂಟಿಂಗ್‌: ಕಂಚು ಗೆದ್ದ ಓಂ ಪ್ರಕಾಶ್‌ ಮಿಥರ್ವಾಲ್

ಗೋಲ್ಡ್‌ಕೋಸ್ಟ್: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಓಂ ಪ್ರಕಾಶ್‌ ಮಿಥರ್ವಾಲ್ ಅವರು ಶೂಟಿಂಗ್ ವಿಭಾಗದಲ್ಲಿ ಕಂಚು ಗೆದ್ದರು.

ಪುರುಷರ 50 ಮೀಟರ್ಸ್‌ ಏರ್ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಓಂ ಪ್ರಕಾಶ್ ಅವರು 201.1 ಸ್ಕೋರ್ ಕಲೆಹಾಕಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಈ ಕ್ರೀಡಾಕೂಟದಲ್ಲಿ ಪಡೆದ ಎರಡನೇ ಕಂಚಿನ ಪದಕವಿದು.  10 ಮೀಟರ್ಸ್ ಶೂಟಿಂಗ್ ವಿಭಾಗದಲ್ಲೂ ಕಂಚಿನ ಪದಕ ಜಯಿಸಿದ್ದರು.

ಮಹಿಳೆಯರ ಏರ್ ಪಿಸ್ತೂಲ್‌ ವಿಭಾಗದಲ್ಲಿ ಹೀನಾ ಸಿಧು ಅವರು ಎರಡು ಪದಕಗಳನ್ನು ಜಯಿಸಿದ ಬಳಿಕ ಓಂ ಪ್ರಕಾಶ್‌ ಅವರು ಎರಡು ಕಂಚಿನ ಪದಕ ಗೆದ್ದ ಎರಡನೇ ಭಾರತೀಯ ಎಂಬ ಶ್ಲಾಘನೆಗೆ ಭಾಜನರಾಗಿದ್ದಾರೆ.

ಈ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 11 ಚಿನ್ನ, 4 ಬೆಳ್ಳಿ, 7 ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ.

ಪ್ರತಿಕ್ರಿಯಿಸಿ (+)