‘ಮಾಲೀಕಯ್ಯ ಗೆದ್ದು ತೋರಿಸಲಿ’: ಪ್ರಿಯಾಂಕ್‌ ಖರ್ಗೆ

ಶುಕ್ರವಾರ, ಮಾರ್ಚ್ 22, 2019
28 °C

‘ಮಾಲೀಕಯ್ಯ ಗೆದ್ದು ತೋರಿಸಲಿ’: ಪ್ರಿಯಾಂಕ್‌ ಖರ್ಗೆ

Published:
Updated:
‘ಮಾಲೀಕಯ್ಯ ಗೆದ್ದು ತೋರಿಸಲಿ’: ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ‘ಅಪ್ಪ–ಮಗನನ್ನು ಸೋಲಿಸುತ್ತೇನೆ ಎಂದು ಹೇಳುವ ಮಾಲೀಕಯ್ಯ ಗುತ್ತೇದಾರ ಅಫಜಲಪುರದಲ್ಲಿ ಗೆದ್ದು ತೋರಿಸಲಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಚ್ಚಾ ಯಾರು ಎಂಬುದನ್ನು ಮತದಾರರು ತೀರ್ಮಾನಿಸುತ್ತಾರೆ. ಅಫಜಲಪುರ ಕ್ಷೇತ್ರಕ್ಕೆ ಹೋಗಿ ನಾನು ಪ್ರಚಾರ ಮಾಡುತ್ತೇನೆ. ಮಾಲೀಕಯ್ಯ ಅಲ್ಲಿ ಗೆದ್ದು ತೋರಿಸಲಿ’ ಎಂದು ಪುನರುಚ್ಚರಿಸಿದರು.

‘ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಗಾಳಿ ಸುದ್ದಿ. ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಗಾಳಿ ಸುದ್ದಿ ಹಬ್ಬಿಸಿದೆ.

ಚಿತ್ತಾಪುರದಿಂದಲೇ ನನ್ನ ಸ್ಪರ್ಧೆ ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry