ಕೊಳ್ಳೇಗಾಲ: ಕಾಂಗ್ರೆಸ್‌ ಮುಖಂಡರ ಪೂರ್ವಭಾವಿ ಸಭೆ

7

ಕೊಳ್ಳೇಗಾಲ: ಕಾಂಗ್ರೆಸ್‌ ಮುಖಂಡರ ಪೂರ್ವಭಾವಿ ಸಭೆ

Published:
Updated:

ಕೊಳ್ಳೇಗಾಲ: ಹನೂರು ವಿಧಾನಸಭಾ ಕ್ಷೇತ್ರದ 450 ಗ್ರಾಮಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಮತ್ತೊಮ್ಮೆ ಶಾಸಕನಾಗಲು ಅವಕಾಶ ನೀಡಿಬೇಕು ಎಂದು ಹನೂರು ಶಾಸಕ ಆರ್. ನರೇಂದ್ರ ಮನವಿ ಮಾಡಿದರು.

ತಾಲ್ಲೂಕಿನ ಸತ್ತೆಗಾಲ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈ ಗ್ರಾಮಕ್ಕೂ ಸಹ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ಬೃಹತ್ ಪ್ರಮಾಣದ ಕೊಡುಗೆ ನೀಡಿದೆ ಎಂದರು

ಸಭೆಯಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ನಾಗರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೆರಾಜ್, ಟಿಎಪಿಎಂಸಿ ನಿರ್ದೇಶಕ ಚೆಲುವರಾಜು, ಮುಖಂಡರಾದ ದಿವ್ಯರಾಜ್, ಸಿದ್ದರಾಜು ಮತ್ತಿತರರು ಇದ್ದರು.

ಕೊಳವೆ ಬಾವಿಗೆ ಮನವಿ: ಶಾಸಕ ಆರ್.ನರೇಂದ್ರ ಅವರು ಮಾತನಾಡುವ ಸಂದರ್ಭದಲ್ಲಿ ನಂಜುಂಡಯ್ಯ ಸಭೆಯ ಮಧ್ಯಪ್ರವೇಶಿಸಿ ನಮ್ಮ ಗ್ರಾಮದ ರೈತರ ಜಮೀನಿಗೆ ಸರ್ಕಾರದ ವತಿಯಿಂದ ಕೊಳವೆ ಬಾವಿ ಹಾಕಿಸಿಲ್ಲ ಮತ್ತು ಗ್ರಾಮದ ಅಭಿವೃದ್ಧಿ ಕುಂಟಿತವಾಗಿದೆ ಎಂದು ಆರೋಪ ಮಾಡಿದರು. ಮುಖಂಡರು ಅವರನ್ನು ಸಮಾಧಾನಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry