ಮಂಗಳವಾರ, ಡಿಸೆಂಬರ್ 10, 2019
23 °C

ಬಿಜೆಪಿಯನ್ನು ಕ್ಯಾನ್ಸರ್‌ಗೆ ಹೋಲಿಸಿದ ಪ್ರಕಾಶ್ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯನ್ನು ಕ್ಯಾನ್ಸರ್‌ಗೆ ಹೋಲಿಸಿದ ಪ್ರಕಾಶ್ ರೈ

ಬೆಳಗಾವಿ: ಬಹುಭಾಷಾ ನಟ ಪ್ರಕಾಶ್ ರೈ ಅವರು ಬಿಜೆಪಿಯನ್ನು ಕ್ಯಾನ್ಸರ್‌ಗೆ ಹೋಲಿಸಿದ್ದು, ಇತರ ರಾಜಕೀಯ ಪಕ್ಷಗಳನ್ನು ಜ್ವರ, ಕೆಮ್ಮು, ನೆಗಡಿ ಮತ್ತಿತರ ಸಣ್ಣ ಕಾಯಿಲೆಗಳಿಗೆ ಹೋಲಿಸಿದ್ದಾರೆ. ಜತೆಗೆ, ಕ್ಯಾನ್ಸರ್ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಜನತೆಯನ್ನು ಒತ್ತಾಯಿಸಿದ್ದಾರೆ.

‘ಜಸ್ಟ್ ಆಸ್ಕಿಂಗ್ ಫೌಂಡೇಶನ್‌’ ಪರವಾಗಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. 2019ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಾರದು’ ಎಂದು ಹೇಳಿದ್ದಾರೆ.

‘ಕಾವೇರಿ ನದಿ ನೀರು ಹಂಚಿಕೆ ಪರಿಹಾರವಿಲ್ಲದ ಸಮಸ್ಯೆಯಲ್ಲ. ಪಟ್ಟಭದ್ರ ಹಿತಾಸಕ್ತಿಗಾಗಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಸಮಸ್ಯೆಯನ್ನು ಜೀವಂತ ಇರುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ನೈಲ್ ನದಿಯ ನೀರನ್ನು ಐದು ದೇಶಗಳು ಹಂಚಿಕೊಳ್ಳಬಹುದಾದರೆ ಎರಡು ಅಥವಾ ಮೂರು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೊಳ್ಳುವ ಬಗ್ಗೆ ಯಾಕೆ ಪರಿಹಾರ ಕಾಣಬಾರದು’ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

‘ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ, ಆ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ಪ್ರಾದೇಶಿಕ ಪಕ್ಷಗಳು ಬಲಯುತಗೊಳ್ಳಬೇಕು’: ಒಕ್ಕೂಟ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಪ್ರಾದೇಶಿಕ ಪಕ್ಷಗಳು ಬಲಯುತಗೊಳ್ಳಬೇಕು. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ವಿಷಯಗಳ ಬಗ್ಗೆ ಕಳಕಳಿ ಹೊಂದಿರುವುದಿಲ್ಲ ಎಂದೂ ಪ್ರಕಾಶ್ ರೈ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)