ಕಮ್ಯೂನಿಸ್ಟರ ಸಿದ್ಧಾಂತ ಸ್ಥಿರ: ವಿಲ್‍ಫ್ರೆಡ್

7
ಮಾರ್ಕ್ಸ್‌ವಾದಿ ಜನಾಂದೋಲನಕ್ಕಾಗಿ ಕಮ್ಯೂನಿಸ್ಟ್‌ರ ಸಮಾವೇಶ

ಕಮ್ಯೂನಿಸ್ಟರ ಸಿದ್ಧಾಂತ ಸ್ಥಿರ: ವಿಲ್‍ಫ್ರೆಡ್

Published:
Updated:

ಬೆಳ್ತಂಗಡಿ: ಜಗತ್ತಿನಲ್ಲಿ ಅತಿ ಜನಪ್ರಿಯವಾದ ಸಿದ್ಧಾಂತವಿದ್ದರೆ ಅದು ಕಮ್ಮುನಿಸಂ. ಕಮ್ಯೂನಿಷ್ಟ್ ಸಿದ್ಧಾಂತವನ್ನು ಒಪ್ಪಿಕೊಂಡವರು, ಅವರು ಎಲ್ಲೇ ಹೊದರು ಸಿದ್ಧಾಂತವನ್ನು ಬದಲಾಯಿಸಲಾರರು. ಬೇರೆ ಪಕ್ಷಗಳಿಗೂ ಹೋದರೂ ಕಮ್ಯೂನಿಷ್ಟ್ ಮನೋಭಾವನೆಯಲ್ಲೇ ಇರುತ್ತಾರೆ ಎಂದು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ವಿಲ್‍ಫ್ರೆಡ್ ಡಿಸೋಜ ಹೇಳಿದರು.

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಮಾರ್ಕ್ಸ್‌ವಾದಿ ಜನಾಂದೋಲನಕ್ಕಾಗಿ ಕಮ್ಯೂನಿಸ್ಟ್‌ರ ಸಮಾವೇಶ' ಉದ್ಘಾಟಿಸಿ ಅವರು  ಮಾತನಾಡಿದರು.

ಕರ್ನಾಟಕ ಪ್ರಜಾರಂಗದ ಸಾಹಿತಿ ಅಸ್ತ್ರ ಆದಿತ್ಯ , ‘ಸತ್ಯ, ನ್ಯಾಯಕ್ಕೆ ಸಿದ್ದಗೊಂಡ ಸಮಾವೇಶ, ಚಳವಳಿ ಇದಾಗಿದ್ದು ಯಶಸ್ವಿಯಾಗಿ ಮುನ್ನಡೆ

ಯುತ್ತದೆ. ಅಂಬಾನಿ, ಅದಾನಿಗಳಿಗೆ ಮಾತ್ರ ಅಚ್ಛೆ ದಿನ್ ಬಂದಿದೆಯೇ ಹೊರತು ಬಡವರಿಗೆ ಬಂದಿಲ್ಲ’ ಎಂದರು.

ಕಾರ್ಮಿಕ ಮುಖಂಡ ವಿಷ್ಣು ಮೂರ್ತಿ ಭಟ್ ಮಾತನಾಡಿ ‘ಕಮ್ಯೂನಿಸಂ ಸಿದ್ಧಾಂತ ಒಪ್ಪಿಕೊಂಡವರಿಗೆ ಜಾತಿ ಎಂದಿಗೂ ಮುಖ್ಯವಾಗುವುದಿಲ್ಲ. ನ್ಯಾಯ ನೀತಿ ಮಾತ್ರ ಮುಖ್ಯವಾದುದು.ಜನಪರವಾದ ಕಾರ್ಯಗಳಿಂದ ಮಾತ್ರ ಜನರ ಪ್ರೀತಿ ಗಳಿಸಲು ಸಾಧ್ಯ’ ಎಂದರು.

ಆದಿವಾಸಿ ಹಕ್ಕುಗಳ ನಿರ್ಣಯಗಳನ್ನು ಚನಿಯಪ್ಪ ಮಂಡಿಸಿದರು.  ವೇದಿಕೆಯಲ್ಲಿ ಸಿಪಿಎಂ ತಾಲೂಕು ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಪಾಂಗಾಳ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಗುತ್ತಿಗೆ ಕೆಲಸಗಾರರ ಸಂಘದ ಅಧ್ತಕ್ಷ ಸಿ. ಮಹಮ್ಮದ್, ಬೆಳ್ತಂಗಡಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ. ಭಟ್, ಸದಸ್ಯರಾದ ನಾರಾಯಣ ಕೈ ಕಂಬ, ಲೋಕೇಶ್, ದೇವಕಿ, ನೆಬಿಸಾ, ಶ್ಯಾಮರಾಜ್, ಈಶ್ವರಿ, ಜಯರಾಮ ಮಯ್ಯ, ಮಹಮ್ಮದ್, ಧನಂಜಯ ಗೌಡ, ಡೊಂಬಯ್ಯ ಗೌಡ, ಸಂಜೀವ ನಾಯ್ಕ, ನೀಲೇಶ್, ಮಹಿಳಾ ಸಂಘದ ಕಿರಣ್‍ಪ್ರಭಾ ಇದ್ದರು.

‘ಮಾರ್ಕ್ಸ್‌ವಾದಿ ಜನಾಂದೋಲನ ಸಂಘಟನೆಗಳ ಒಕ್ಕೂಟ ಎಂಬ ಸಂಚಾಲನಾ ಸಮಿತಿಯನ್ನು ಜಾರಿಗೆ ತರಲಾಯಿತು. ಕಾರ್ಯಕ್ರಮವನ್ನು ಶ್ಯಾಮ್ ಭಟ್ ನಿರೂಪಿಸಿ ಲೋಕೇಶ್ ಧನ್ಯವಾದ ಸಲ್ಲಿಸಿದರು.

‘ಕೆಂಬಾವುಟದ ಪೇಟೆಂಟ್‍ ಯಾರಿಗೂ ಕೊಟ್ಟಿಲ್ಲ’

ಕಮ್ಯುನಿಸ್ಟ್ ಎಂಬುದು ಒಂದು ಜನಪರ ಸಿದ್ಧಾಂತ. ಶ್ರಮಿಕರ, ದುಡಿಯುವ ವರ್ಗದ ಮಾನವೀಯ ಪರವಾದ ಸಿದ್ಧಾಂತ. ಇದಕ್ಕೆ ಸಾಮಾಜಿಕ ನ್ಯಾಯದ ಮಾನವೀಯ ಮುಖವಿದೆ. ಪ್ರಗತಿಪರ ಚಿಂತನೆಯು ಇಂದು ದೇಶಕ್ಕೆ ಅನಿವಾರ್ಯವಾಗಿದೆ. ಇದನ್ನು ಕಮ್ಯುನಿಸ್ಟ್ ಪಕ್ಷ ಹೊಂದಿದೆ. ಯಾರು ಜನಬೆಂಬಲ ಪಡೆಯುತ್ತಾರೆ ಅವರು ನಾಯಕರಾಗುತ್ತಾರೆ. ಒಳಜಗಳಕ್ಕೆ ಅವಕಾಶವೀಯದೆ ನಾಯಕರಾಗುವ ಎಲ್ಲಾ ಲಕ್ಷಣಗಳನ್ನು ಈ ಸಿದ್ಧಾಂತದ ಅಡಿಯಲ್ಲಿ ಅರಳಬೇಕು. ಕೆಂಬಾವುಟ ರಾಜಕೀಯ ಪಕ್ಷದ ಸಿದ್ಧಾಂತವಾಗಲಾರದು. ಇದರ ಮೇಲಿನ ಪೇಟೆಂಟ್‍ನ್ನು ಯಾರಿಗೂ ಕೊಟ್ಟಿಲ್ಲ. ನಮ್ಮದು ಜನಪರ ಸಿದ್ಧಾಂತವೇ ಹೊರತು ಯಾವುದೇ ರಾಜಕೀಯ ಪಕ್ಷದ ಸೊತ್ತಲ್ಲ. ನೋವು, ಕಷ್ಟ, ನಷ್ಟಗಳನ್ನು ನುಂಗಿಕೊಂಡು, ಭಿನ್ನಾಭಿಪ್ರಾಯ, ದ್ವೇಷ, ಮನಸ್ತಾಪಗಳನ್ನು ಬದಿಗಿರಿಸಿ ಸಂಘಟನೆಯನ್ನು ಬೆಳೆಸೋಣ ಎಂದು ವಿಲ್‍ಫ್ರೆಡ್ ಡಿಸೋಜ ಹೇಳಿದರು.

ಸಮಾವೇಶದ ನಿರ್ಣಯಗಳು

ಸೌಹಾರ್ದದಿಂದ ಬದುಕಬೇಕು. ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಬೇಕು. ಬೀಡಿ ಕಾರ್ಮಿಕರಿಗೆ ತುಟ್ಟಿ ಭತ್ಯೆ ನೀಡಬೇಕು ಬಿಸಿಯೂಟ, ಅಂಗನವಾಡಿ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರಿಗೆ ಕನಿಷ್ಠ ವೇತನ ಸಿಗಬೇಕು. ಕಸ್ತೂರಿ ರಂಗನ್ ವರದಿ ತಿದ್ದುಪಡಿ ಆಗಬೇಕು. ಪರಿಸರ ರಕ್ಷಣೆ ಜತೆಗೆ ಅಲ್ಲಿ ವಾಸವಾಗಿರುವ ಮಾನವ ಸಂರಕ್ಷಣೆಯ ಕೆಲಸವೂ ಆಗಬೇಕು. ಚುನಾವಣೆಯಲ್ಲಿ ಜಯಗಳಿಸುವ ವ್ಯಕ್ತಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಬೇಕು. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು.

**

ಸಮಾನತೆ ಬಂದಾಗ ಮಾತ್ರ ನೆಮ್ಮದಿಯ ಬದುಕು ಈ ಸಮಾಜದಲ್ಲಿ ಸಾಧ್ಯ. ಕಾರ್ಮಿಕ ಸಂಘಟನೆಗಳು ಗಟ್ಟಿಯಾದಾಗ ಮಾತ್ರ ಹೋರಾಟ ಯಶಶ್ವಿಯಾಗಲು ಸಾಧ್ಯ. ಅನ್ಯಾಯವನ್ನು ಅನುಭವಿಸುವ ಮನಸ್ಸಿರದೆ ಪ್ರತಿಭಟಿಸುವ ಮನೋಧರ್ಮವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು – ಬಿ.ಎಂ.ಭಟ್

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry