ಮಂಗಳವಾರ, ಡಿಸೆಂಬರ್ 10, 2019
25 °C

ಸ್ವಿಮ್ಮಿಂಗ್ ಪೂಲ್ ಆಯ್ತು ಕಾರು

Published:
Updated:
ಸ್ವಿಮ್ಮಿಂಗ್ ಪೂಲ್ ಆಯ್ತು ಕಾರು

‘ಹಳೆಯ ಕಾರನ್ನು ಏನು ಮಾಡಬಹುದು?’ ಈ ಯೋಚನೆ ಬಂದಿದ್ದು ಲಾಸ್‌ ಏಂಜಲೀಸ್‌ನಲ್ಲಿನ ಈ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ. ಆ ವಿದ್ಯಾರ್ಥಿಗಳೇ ಫಿಲ್ ವಿಕ್ಕರ್ ಹಾಗೂ ಫಾರ್‌ಸ್ಟರ್.

ಕೆನಡಾದಲ್ಲಿ ಓದುತ್ತಿದ್ದ ಇವರು, 1969ರ ಕ್ಯಾಡಿಲ್ಯಾಕ್ ಕೂಪ್ ಡಿವಿಲ್ಲೆ ಕಾರನ್ನು $800 ಕೊಟ್ಟು ಖರೀದಿಸಿದ್ದರು. ಆದರೆ ಅವರಿಗೆ ಈ ಕಾರನ್ನು ಕಾರಾಗಿ ಮಾತ್ರವಲ್ಲ, ಬೇರೆ ಏನನ್ನಾದರೂ ಅದರಲ್ಲಿ ಹೊರತರಬೇಕು ಎಂಬ ಆಸೆ.

ಆಗ ಅವರಲ್ಲಿ ಹೊಳೆದದ್ದೇ ಸ್ವಿಮ್ಮಿಂಗ್ ಪೂಲ್ ಪರಿಕಲ್ಪನೆ. ಈ ಕಾರನ್ನು ಮೊಬೈಲ್ ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತಿಸಲು ಮುಂದಾದರು. ಚಲಿಸುವ ಹಾಟ್‌ ಟಬ್‌ನಂತೆ ಕಾರನ್ನು ಮಾರ್ಪಾಡು ಮಾಡುವ ಕೆಲಸವನ್ನು ಶುರುವಿಟ್ಟುಕೊಂಡೇಬಿಟ್ಟರು.

ಆರು ವರ್ಷಗಳ ನಿರಂತರ ಪ್ರಯತ್ನದ ನಂತರ ಕೊನೆಗೂ ಈ ಪೂಲ್ ಸಿದ್ಧಗೊಂಡಿತು. 5,000 ಎಲ್‌ಬಿ ನೀರನ್ನು ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ವಿ8 ಎಂಜಿನ್, ನೀರಿನ ಉಷ್ಣತೆಯನ್ನು ಹದದಲ್ಲಿಡುವಂತೆ ನೋಡಿಕೊಳ್ಳುತ್ತದೆ.ಇದರ ಉಷ್ಣತೆ 102 F. ವಾಟರ್‌ ಟೈಟ್ ಸ್ಟೀರಿಂಗ್ ಸಿಸ್ಟಂ ಅಳವಡಿಸಲಾಗಿದೆ. ಒಳಾಂಗಣ ಫೈಬರ್ ಗ್ಲಾಸ್ ಆದ್ದರಿಂದ ಎಲ್ಲೂ ಲೀಕ್ ಆಗುವುದಿಲ್ಲ. ‘ಹಾಟ್ ಟಬ್ ಆನ್ ವೀಲ್ಸ್’ ಎಂದು ಈ ಕಾರನ್ನು ಪ್ರಸಿದ್ಧಿಗೊಳಿಸಿದ್ದಾರೆ.

ಜೊತೆಗೆ ಈ ಕಾರು ಚಲಾಯಿಸಿಕೊಂಡೇ ಎಷ್ಟೋ ಊರು ಸುತ್ತಿದ್ದಾರೆ ಕೂಡ.

ಪ್ರತಿಕ್ರಿಯಿಸಿ (+)