ಟ್ರಾನ್ಸ್‌ಫಾರ್ಮರ್‌ನಲ್ಲಿ ಕಿಡಿ: ಗಿಡ–ಮರ ಬೆಂಕಿಗೆ ಆಹುತಿ

7

ಟ್ರಾನ್ಸ್‌ಫಾರ್ಮರ್‌ನಲ್ಲಿ ಕಿಡಿ: ಗಿಡ–ಮರ ಬೆಂಕಿಗೆ ಆಹುತಿ

Published:
Updated:

ಕಾರ್ಕಳ: ತಾಲ್ಲೂಕಿನ ಮುಂಡ್ಕೂರು ಅಲಂಗಾರುಗುಡ್ಡೆ ಎಂಬಲ್ಲಿ ಅಳ ವಡಿಸಿದ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಶಾಟ್ ಸರ್ಕ್ಯೂಟ್ ಆಗಿ ಸೋಮವಾರ ರಾತ್ರಿ ಸುತ್ತಲಿನ ಪರಿಸರದ ಮರ ಗಿಡಗಳು ಬೆಂಕಿಗೆ ಆಹುತಿ ಆಗಿವೆ.

ಬೇಸಿಗೆಯ ಬಿಸಿಲಿನ ಧಗೆಗೆ ಅಲ್ಲಲ್ಲಿ ಅಡಳವಡಿಸಿದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಪಕ್ಕದ ಗಿಡಗಂಟಿಗಳಿಗೆ ಶಾಟ್ ಸರ್ಕ್ಯೂಟ್‌ನ ಬೆಂಕಿಯ ಕಿಡಿಗಳು ತಾಗಿ ಆಸುಪಾಸಿನ ಗುಡ್ಡಗಾಡುಗಳಿಗೆ ಬೆಂಕಿ ತಗುಲುವ ಪ್ರಕರಣಗಳು ನಡೆಯುತ್ತಿವೆ. ಈ ಕುರಿತು ಮೆಸ್ಕಾಂ ಇಲಾಖೆ ಕಟ್ಟೆಚ್ಚರದ ಕ್ರಮ ಕೈಗೊಂಡರೂ ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ.

ವಿದ್ಯುತ್ ಪರಿವರ್ತಕಗಳ ಪಕ್ಕದಲ್ಲಿ ಕುರುಚಲು ಗಿಡ, ಹುಲ್ಲನ್ನು ಕತ್ತರಿಸಿ ಸ್ವಚ್ಛ ಮಾಡುವ ಕೆಲಸ ನಡೆಯುತ್ತಿಲ್ಲ. ಕಾಲಕಾಲಕ್ಕೆ ಸ್ವಚ್ಛತೆ ನಡೆಸಿದರೆ ಪರಿವರ್ತಕಗಳಿಂದ ಹೊರ ಬರುವ ಬೆಂಕಿಯ ಕಿಡಿಗಳು ಹರಡುವುದಿಲ್ಲ. ಇವು ಜನವಸತಿರಹಿತ ಪ್ರದೇಶಗಳಲ್ಲಿ ಇರುವುದರಿಂದ ಅಪಾಯ ಕಡಿಮೆ ಎಂಬ ಭಾವನೆ ಇದಕ್ಕೆ ಕಾರಣವಾಗಿ ಸ್ವಚ್ಛತೆಯತ್ತ ನಿರ್ಲಕ್ಷ್ಯ ವಹಿಸಿರಬಹುದು.ತಾಲ್ಲೂಕಿನ ಅಲಂಗಾರುಗುಡ್ಡೆಯ ಕೋರೆ ಪ್ರದೇಶದಲ್ಲಿ ಸತತ ಎರಡನೇ ವರ್ಷ ಬೆಂಕಿ ಪ್ರಕರಣ ನಡೆಯುತ್ತಿದೆ. ಸೋಮವಾರ ರಾತ್ರಿ ಬಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಮಂಗಳವಾರ ಬೆಳಿಗ್ಗೆ ಬಂದು ಪ್ರಯತ್ನಿಸಿದರೂ ಮಂಗಳವಾರ ಮಧ್ಯಾಹ್ನದವರೆಗೂ ಬೆಂಕಿ ಉರಿಯುತ್ತಿತ್ತು. ಸ್ಥಳೀಯ ಪಂಚಾಯಿತಿ ಸದಸ್ಯ ಸೋಮನಾಥ್ ಸಾರ್ವಜನಿಕರ ಸಹಕಾ ರದೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry