ಮಂಗಳವಾರ, ಆಗಸ್ಟ್ 11, 2020
27 °C

ಫೋರ್ಡ್‌ನಿಂದ ‘ಫ್ರೀಸ್ಟೈಲ್ ಇಂಡಿಯಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೋರ್ಡ್‌ನಿಂದ ‘ಫ್ರೀಸ್ಟೈಲ್ ಇಂಡಿಯಾ’

ಫೋರ್ಡ್ ಇಂಡಿಯಾ, ತನ್ನ ಫೋರ್ಡ್‌ ಫ್ರೀಸ್ಟೈಲ್ ಸಿಯುವಿ ಕಾರನ್ನು ಏಪ್ರಿಲ್ 18ರಂದು ಬಿಡುಗಡೆಗೊಳಿಸಲಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದೆ.

ಈ ಸಿಯುವಿ ಸ್ಟೈಲಿಶ್ ಆಗಿರುವುದು ಪ್ರತಿ ಕೋನದಲ್ಲೂ ಗೋಚರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ದೊಡ್ಡ ಹೆಡ್‌ಲ್ಯಾಂಪ್, ಕಪ್ಪು ಫ್ರಂಟ್ ಗ್ರಿಲ್‌ನೊಂದಿಗೆ ಹನಿಕೋಂಬ್ ಮೆಶ್, ಮಸ್ಕುಲರ್ ಬಂಪರ್, ಸಿ ಆಕಾರದ ಫಾಗ್ ಲ್ಯಾಂಪ್‌ಗಳು, ರೂಫ್ ರೇಲ್‌ಗಳು, ಇಂಡಿಕೇಟರ್ ಇಂಟೆಗ್ರೇಟ್‌ನ ಒಆರ್‌ವಿಎಂಗಳು, ಬ್ಲಾಕ್ ಕ್ಲಾಡಿಂಗ್, ಸ್ಪೋರ್ಟಿ ಆಗಿರುವ ಬಾಡಿ ಗ್ರಾಫಿಕ್, ಅಲಾಯ್ ವೀಲ್‌ಗಳು ಇವೆಲ್ಲವೂ ವಿನ್ಯಾಸಕ್ಕೆ ಒತ್ತು ನೀಡಿರುವ ಅಂಶಗಳು.

ಕ್ಯಾಬಿನ್ ಒಳಗೆ, ಬ್ಲಾಕ್ ಥೀಮ್ ಬಳಸಲಾಗಿದೆ. ಮೂರು ಸ್ಪೋಕ್‌ಗಳ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಅನಲಾಗ್, ಡಿಜಿಟಲ್ ಡಿಸ್‌ಪ್ಲೇ –ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಬ್‌ನಂತಿರುವ ಟಚ್‌ಸ್ಕ್ರೀನ್ SYNC3 ಇನ್ಫೊಟೇನ್ಮೆಂಟ್ ಸಿಸ್ಟಂ, ಆ್ಯಂಡ್ರಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್‌ ಪ್ಲೇ, ಎಸಿ ವೆಂಟ್‌ಗಳು ಇವೆ. ವಿಸ್ತಾರ ಜಾಗ ಹೊಂದಿದ್ದು, ಎರಡು ಏರ್‌ಬ್ಯಾಗ್‌ಗಳು, ಕರ್ಟೇನ್ ಏರ್‌ ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಸುರಕ್ಷತಾ ಆಯ್ಕೆಗಳಾಗಿ ನೀಡಲಾಗಿದೆ. ಕಾರಿಗೆ ಆ್ಯಕ್ಟಿವ್ ರೋಲ್‌ಓವರ್ ಪ್ರಿವೆಂಶನ್ ತಂತ್ರಜ್ಞಾನ ಅಳವಡಿಸಿರುವುದು ವಿಶೇಷ.

ಆ್ಯಂಬಿಯಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಈ ನಾಲ್ಕು ಆವೃತ್ತಿಗಳಲ್ಲಿ ಲಭ್ಯ. ಮುಂಭಾಗದಲ್ಲಿ ಪವರ್‌ಟ್ರೇನ್ ಇದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಯುನಿಟ್‌ ಒಳಗೊಂಡಿದೆ. ಪೆಟ್ರೋಲ್ ಮೋಟಾರು 95 ಬಿಎಚ್‌ಪಿ ಪೀಕ್ ಪವರ್ ಹಾಗೂ 120 ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಡೀಸೆಲ್ ಮೋಟಾರು 99 ಬಿಎಚ್‌ಪಿ ಪೀಕ್ ಪವರ್ ಹಾಗೂ 215 ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಪೆಟ್ರೋಲ್ ಹಾಗೂ ಡಿಸೆಲ್ ಎಂಜಿನ್ 19 ಕಿ.ಮೀ ಹಾಗೂ 24.4 ಕಿ. ಮೀ ಮೈಲೇಜ್ ನೀಡಲಿದೆ. ಇದಕ್ಕೆ 6 ಲಕ್ಷದಿಂದ 8 ಲಕ್ಷ ರೂಪಾಯಿ (ಎಕ್ಸ್ ಶೋರೂಂ, ದೆಹಲಿ) ಬೆಲೆ ನಿಗದಿಗೊಳಿಸಲಾಗಿದೆ.

*ಮತ್ತೆ ಬರುವುದೇ ಸುಜುಕಿ ಕಟಾನಾ?

80ರ ದಶಕದಲ್ಲಿ ತನ್ನ ಲುಕ್‌ನಿಂದಲೇ ಭಾರೀ ಸುದ್ದಿ ಮಾಡಿದ್ದ ಕಟಾನಾ ಮಾನಿಕರ್ ಸುಜುಕಿಯ ಮುಂದಿನ ಲೈನ್‌ ಅಪ್‌ನಲ್ಲಿ ಮತ್ತೆ ಪರಿಚಿತಗೊಳ್ಳಲಿದೆ.

ಅಮೆರಿಕದ ಪೇಟೆಂಟ್ ಹಾಗೂ ಟ್ರೇಡ್‌ಮಾರ್ಕ್ ಕಚೇರಿ, ಫೆಬ್ರುವರಿ 8ಕ್ಕೆ ಸುಜುಕಿ ಕಟಾನಾ ಹೆಸರಿನಲ್ಲಿ ನೋಂದಣಿಗೆ ಹೊಸ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.

2017 ಇಐಸಿಎಂಎ ಪ್ರದರ್ಶನದಲ್ಲಿ, ಸುಜುಕಿ ಕಟಾನಾ ಬ್ರಾಂಡ್‌, ಜಿಎಸ್ಎಕ್ಸ್ ಎಸ್ 1000ಎಫ್ ಅನ್ನು ಪ್ರದರ್ಶಿಸಿತ್ತು. ಕಟಾನಾ ಅನ್ನು ಮೊದಲು 1979ರಲ್ಲಿ ಟಾರ್ಗೆಟ್ ಡಿಸೈನ್ ಆಫ್ ಜರ್ಮನಿ ವಿನ್ಯಾಸಗೊಳಿಸಿತ್ತು. ಕಂಪನಿ ತನ್ನ ಸೆಮಿ ಫೇರ್ಡ್ ಟೂರಿಂಗ್ ಮೋಟಾರು ಸೈಕಲ್‌ಗೆ ಈ ಹೆಸರನ್ನು ಬಳಸಿಕೊಂಡಿತು. 1981ರಿಂದ ಇದು ಚಾಲ್ತಿಯಲ್ಲಿತ್ತು.

ಜಪಾನೀ ಬೈಕ್ ತಯಾರಕರು 550 ಸಿಸಿ, 650 ಸಿಸಿ, 750 ಸಿಸಿ ಹಾಗೂ 1100 ಸಿಸಿ ಕಟಾನಾಗಳನ್ನು ತಯಾರಿಸಿದ್ದರು. ಇದರಲ್ಲಿ 1100 ಸಿಸಿ ತುಂಬಾ ಪ್ರಸಿದ್ಧಿ ಪಡೆದಿತ್ತು.

ಮುಂದೆ ಬರುತ್ತಿರುವ ಈ ಮೋಟಾರು ಸೈಕಲ್, ಯಾವುದೇ ಬೈಕ್‌ಗಳ ಆಧಾರಿತವಾಗಿಲ್ಲ, ಸಂಪೂರ್ಣ ಹೊಸತು ಎಂದು ಹೇಳಿಕೊಂಡಿದೆ ಕಂಪನಿ. ಮೂಲ ಕಟಾನಾದಂತಿದ್ದು, ಖಡ್ಗದ ಲೋಗೊ ಹೊಂದಿರಲಿದೆ. ಮುಂದಿನ ವರ್ಷಕ್ಕೆ ಇದರ ತಯಾರಿ ಕೆಲಸ ಆರಂಭಗೊಳ್ಳಲಿರುವುದಾಗಿ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.