ಶನಿವಾರ, ಡಿಸೆಂಬರ್ 14, 2019
20 °C

ಉಪ್ಪೇ ಇಲ್ಲದ ಉಪ್ಪಿಟ್ಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ್ಪೇ ಇಲ್ಲದ ಉಪ್ಪಿಟ್ಟು!

ನಾನು ಅಮ್ಮನಿಂದ ಕಲಿತ ಮೊದಲನೆ ಅಡುಗೆಯೇ ಉಪ್ಪಿಟ್ಟು! ಒಮ್ಮೆ ಅಮ್ಮ ಊರಲ್ಲಿರಲಿಲ್ಲ. ಬೆಳಗಿನ ತಿಂಡಿ ಹೊತ್ತಿಗೆ ಬರುವುದಾಗಿ ಹೇಳಿದ್ದರು. ಆ ಸಂದರ್ಭವನ್ನು ಉಪಯೋಗಿಸಿಕೊಂಡು ಕಲಿತ ಮೊದಲ ಅಡುಗೆ ತಯಾರಿಸಿ ಎಲ್ಲರ ಮೆಚ್ಚುಗೆ ಗಳಿಸಬೇಕೆಂಬ ಉತ್ಸಾಹದಲ್ಲಿದ್ದೆ. ಅದರಂತೆಯೇ ಅಮ್ಮ ಬರುವುದರೊಳಗಾಗಿ ಉಪ್ಪಿಟ್ಟು ತಯಾರಿಸಿದೆ. ಚೆನ್ನಾಗೇ ಬಂತು.

ತಮ್ಮ ಮತ್ತು ಅಪ್ಪ ರುಚಿ ನೋಡುವಷ್ಟರಲ್ಲಿಯೇ ನನ್ನ ಅಮ್ಮನ ಆಗಮನವಾಯಿತು. ನಾನೋ ಹೆಮ್ಮೆಯಿಂದ ಅಮ್ಮನಿಗೆ ಉಪ್ಪಿಟ್ಟು ತೋರಿಸಿದೆ. ರುಚಿ ನೋಡಲು ಬಾಯಿಗಿಟ್ಟರು. ನನ್ನನ್ನೊಮ್ಮೆ ನೋಡಿ ‘ಉಪ್ಪೇ ಇಲ್ವಲ್ಲೇ...’ ಅಂದರು. ಆಗ ನನ್ನ ಮುಖ ಪೆಚ್ಚಾಯಿತು.

ಅಮ್ಮ ಒಂದರ್ಧ ಲೋಟ ಬಿಸಿನೀರಿಗೆ ಉಪ್ಪು ಬೆರೆಸಿ ಅದನ್ನು ಉಪ್ಪಿಟ್ಟಿಗೆ ಹಾಕಿ ಕಲಸಿ ಸಣ್ಣ ಉರಿಯಲ್ಲಿ ಕೆದಕಿ ಸರಿ ಮಾಡು ಎಂದರು. ‘ಉಪ್ಪಿಟ್ಟಿನ ಹೆಸರಲ್ಲೇ ಉಪ್ಪಿದೆ. ಆದರೆ, ಉಪ್ಪಿಟ್ಟು ಮಾಡುವಾಗ ಉಪ್ಪು ಮರೀಬೇಡ’. ಅಮ್ಮ ಹೇಳಿದ ಈ ಮಾತು ನನ್ನ ಮನಸಿನಲ್ಲಿ ಇನ್ನೂ ಮಾಸದೆ ಉಳಿದಿದೆ.

–ಶ್ವೇತಾ ಕೆ. ಇಟ್ಟಮಡು, ಬನಶಂಕರಿ 3ನೇ ಹಂತ

ಪ್ರತಿಕ್ರಿಯಿಸಿ (+)