ಗುರುವಾರ , ಡಿಸೆಂಬರ್ 12, 2019
20 °C

ಐಪಿಎಲ್‍ನಲ್ಲಿ ‘ಲಂಬೋದರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್‍ನಲ್ಲಿ ‘ಲಂಬೋದರ’

ಲೂಸ್‍ ಮಾದ ಯೋಗಿ ನಾಯಕರಾಗಿ ನಟಿಸುತ್ತಿರುವ, ಕೆ.ಕೃಷ್ಣರಾಜ್ ನಿರ್ದೇಶನದ ‘ಲಂಬೋದರ’ ಚಿತ್ರತಂಡ ಐಪಿಎಲ್‍ಗಾಗಿ 30 ಸೆಕೆಂಡ್‍ನ ಪ್ರಮೋಷನ್ ವಿಡಿಯೊ ಬಿಡುಗಡೆ ಮಾಡಿದೆ. ಯೋಗಿ, ಧರ್ಮಣ್ಣ ಮತ್ತು ಸಿದ್ದು ಈ ವೀಡಿಯೊದಲ್ಲಿ ಅಭಿನಯಿಸಿದ್ದಾರೆ. ಪೆನಿಸಿಯಾ ಸ್ಟುಡಿಯೊ ಚಿತ್ರೀಕರಿಸಿರುವ ಈ ವಿಡಿಯೊದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

ವೃಷಾಂಕ್ ಮೂವಿ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ. ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ.

ಈ ಚಿತ್ರದ ನಾಯಕಿ ಆಕಾಂಕ್ಷಾ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗಡೆ, ಸಿದ್ದು ಮೂಲಿಮನಿ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)