ಪಿಯು ದಾಖಲಾತಿ ವೇಳಾಪಟ್ಟಿ

7

ಪಿಯು ದಾಖಲಾತಿ ವೇಳಾಪಟ್ಟಿ

Published:
Updated:
ಪಿಯು ದಾಖಲಾತಿ ವೇಳಾಪಟ್ಟಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2018-19ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ವೇಳಾಪಟ್ಟಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯನ್ನು ಪ್ರಕಟಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಮರು ದಿನದಿಂದ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗುತ್ತದೆ. ಮೇ 2ರಿಂದ ದ್ವಿತೀಯ ಪಿಯು, ಮೇ 14 ರಿಂದ ಪ್ರಥಮ ಪಿಯು ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಅಕ್ಟೋಬರ್‌ 14ರಿಂದ 28ರವರೆಗೆ ಮಧ್ಯಂತರ ರಜೆ ಇರುತ್ತದೆ. 2019ರ ಮಾರ್ಚ್‌ 20ಕ್ಕೆ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ ಎಂದು ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ 5ನೇ ಕರ್ತವ್ಯ ನಿರತ ದಿನದವರೆಗೆ ಪ್ರವೇಶ ಅರ್ಜಿಗಳನ್ನು ವಿತರಿಸಲಾಗುತ್ತದೆ.  ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಿದ 2ನೇ ಕಾರ್ಯನಿರತ ದಿನದಂದು ಆಯ್ಕೆಯಾದ ವಿದ್ಯಾರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ. ತೃತೀಯ ಪಟ್ಟಿ ಪ್ರಕಟವಾದ 5ನೇ ಕಾರ್ಯನಿರತ ದಿನದಂದು ಉಳಿದ ಪ್ರವೇಶಗಳಿಗೆ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಪದವಿಪೂರ್ವ ಕಾಲೇಜುಗಳು ತರಗತಿಗಳ ದಾಖಲಾತಿಯ ಮಾಹಿತಿ, ಇಲಾಖೆ ಅನುಮತಿ ಪಡೆದ ಸಂಯೋಜನವಾರು ಪ್ರವೇಶಗಳ ಮಾಹಿತಿ, ಶುಲ್ಕಗಳ ವಿವರಗಳನ್ನು ಸೂಚನಾ ಫಲಕ ಹಾಗೂ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry