ನೋಟಾ ಹಾಕುವುದು ವ್ಯರ್ಥ

7

ನೋಟಾ ಹಾಕುವುದು ವ್ಯರ್ಥ

Published:
Updated:
ನೋಟಾ ಹಾಕುವುದು ವ್ಯರ್ಥ

ನಮ್ಮ ಆಯ್ಕೆಯನ್ನು ತಿಳಿಸುವುದಕ್ಕಾದರೂ ನಾವು ಮತ ಹಾಕಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಆಯ್ಕೆಗೆ ಬಹಳ ಪ್ರಾಮುಖ್ಯತೆ ಇದೆ. ಮತ ಹಾಕದೆಯೇ, ನಗರ ಅಭಿವೃದ್ಧಿಯಾಗಿಲ್ಲ ಎಂದು ದೂರುವುದರಲ್ಲಿ ಅರ್ಥವಿಲ್ಲ. ಮೊದಲು ನಮ್ಮ ಹಕ್ಕನ್ನು ಸರಿಯಾಗಿ ಬಳಸಬೇಕು. ನಮ್ಮನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡಿದಾಗಲೇ ನಮ್ಮ ಬೇಡಿಕೆಗಳನ್ನು ಸಲ್ಲಿಸಲು ಹಾಗೂ ಈಡೇರಿಸದಿದ್ದಲ್ಲಿ ಅದನ್ನು ಪ್ರಶ್ನಿಸಲು ಸಾಧ್ಯ. ಅದಕ್ಕಾಗಿ ಮತದಾನ ಮಾಡಬೇಕು.

ನೋಟಾ ಮತ ಹಾಕುವುದು ವ್ಯರ್ಥ. ಅದರ ಬದಲು, ಇರುವ ಆಯ್ಕೆಯಲ್ಲಿಯೇ ಉತ್ತಮರನ್ನು ಆರಿಸಿ ಅವರಿಗೆ ಮತ ಹಾಕುವುದು ಸರಿ ಎನ್ನುವುದು ನನ್ನ ಅಭಿಪ್ರಾಯ. ಮತದಾನದ ಹಕ್ಕು ಪಡೆದ ನಂತರ ಎಲ್ಲ ಚುನಾವಣೆಗಳಲ್ಲಿಯೂ ನಾನು ತಪ್ಪದೇ ಮತ ಹಾಕಿದ್ದೇನೆ. ನಮ್ಮ ಹಕ್ಕನ್ನು ಸಾಬೀತುಪಡಿಸುವ ಅವಕಾಶ ಕಳೆದುಕೊಳ್ಳಬಾರದು.

-ಉಮಾರಾವ್‌, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry