ಗುರುವಾರ , ಆಗಸ್ಟ್ 13, 2020
21 °C

ಮ್ಯೂಚುವಲ್‌ ಫಂಡ್ಸ್‌: ಮಾರ್ಚ್‌ನಲ್ಲಿ ₹ 50 ಸಾವಿರ ಕೋಟಿ ಹೊರ ಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

ಮ್ಯೂಚುವಲ್‌ ಫಂಡ್ಸ್‌: ಮಾರ್ಚ್‌ನಲ್ಲಿ ₹ 50 ಸಾವಿರ ಕೋಟಿ ಹೊರ ಹರಿವು

ನವದೆಹಲಿ: ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಿಂದ ₹ 50,752 ಕೋಟಿಗಳಷ್ಟು ಮೊತ್ತವನ್ನು ಹೂಡಿಕೆದಾರರು ವಾಪಸ್‌ ಪಡೆದುಕೊಂಡಿದ್ದಾರೆ.

ಟ್ರೆಸರಿ ಬಿಲ್‌, ಸರ್ಕಾರಿ ಸಾಲಪತ್ರ (ಲಿಕ್ವಿಡ್‌ ಫಂಡ್ಸ್‌) ಅಥವಾ ಹಣದ ಮಾರುಕಟ್ಟೆ ವಲಯಗಳಲ್ಲಿ ಅಲ್ಪಾವಧಿಯಲ್ಲಿ ತೊಡಗಿಸಿದ ಮೊತ್ತವನ್ನು ವಾಪಸ್‌ ಪಡೆಯಲಾಗಿದೆ.

ಲಿಕ್ವಿಡ್‌ ಫಂಡ್ಸ್‌ ಮತ್ತು ಸಾಲ ನಿಧಿಗಳಿಂದ ಗರಿಷ್ಠ ಪ್ರಮಾಣದಲ್ಲಿ ಹೊರ ಹರಿವು ನಡೆದಿದೆ ಎಂದು ಭಾರತದ ಮ್ಯೂಚುವಲ್‌ ಫಂಡ್ಸ್‌ಗಳ ಸಂಸ್ಥೆ (ಎಎಂಎಫ್‌ಐ) ತಿಳಿಸಿದೆ.

ಕಡಿಮೆ ಒಳಹರಿವು: 2017–18ರ ಹಣಕಾಸು ವರ್ಷದಲ್ಲಿ ಮ್ಯೂಚುವಲ್‌ ಫಂಡ್ಸ್‌ ಯೋಜನೆಗಳಲ್ಲಿನ ಒಳ ಹರಿವು ₹ 2.72 ಲಕ್ಷ ಕೋಟಿಗಳಷ್ಟಿದೆ. ಇದು 2016–17ರಲ್ಲಿನ ₹ 3.4 ಲಕ್ಷ ಕೋಟಿಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಇದೆ.

ಮಾರ್ಚ್‌ ತಿಂಗಳಲ್ಲಿ ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಒಳಹರಿವು ₹ 2,954 ಕೋಟಿಗಳಷ್ಟಿತ್ತು. ಇದು 20 ತಿಂಗಳ ಹಿಂದಿನ ಕನಿಷ್ಠ ಮಟ್ಟದಲ್ಲಿದೆ. ದೀರ್ಘಾವಧಿ ಲಾಭ ಗಳಿಕೆ ಮೇಲಿನ ತೆರಿಗೆಯಿಂದ ವಿನಾಯ್ತಿ ಪಡೆಯಲು ಹೂಡಿಕೆದಾರರು ಮುಂದಾಗಿರುವುದರಿಂದ ಹೂಡಿಕೆ ಪ್ರಮಾಣ ಕಡಿಮೆ ಮಟ್ಟದಲ್ಲಿ ಇದೆ.

‘ಪ್ರತಿ ವರ್ಷ ಮಾರ್ಚ್‌ ತಿಂಗಳಿನಲ್ಲಿ ಗರಿಷ್ಠ ಪ್ರಮಾಣದ ಹೊರ ಹರಿವು ಇರುವುದು ಸಾಮಾನ್ಯ ವಿದ್ಯಮಾನವಾಗಿದೆ’ ಎಂದು ಬಜಾಜ್‌ ಕ್ಯಾಪಿಟಲ್‌ನ ಮ್ಯೂಚುವಲ್‌ ಫಂಡ್ಸ್‌ ವಹಿವಾಟಿನ ರಾಷ್ಟ್ರೀಯ ಮುಖ್ಯಸ್ಥ ಆಂಜನೇಯ ಗೌತಮ್‌ ಹೇಳಿದ್ದಾರೆ.

ಹಣಕಾಸು ವರ್ಷಾಂತ್ಯದಲ್ಲಿ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳು ಲಿಕ್ವಿಡ್‌ ಫಂಡ್ಸ್‌ಗಳಿಂದ ಗರಿಷ್ಠ ಪ್ರಮಾಣದಲ್ಲಿ ಹಣ ಹಿಂದಕ್ಕೆ ಪಡೆಯುವುದೇ ಇದಕ್ಕೆ ಕಾರಣವಾಗಿದೆ. ಈ ಹಣ ಏಪ್ರಿಲ್‌ ತಿಂಗಳಲ್ಲಿ ಮತ್ತೆ ಮಾರುಕಟ್ಟೆಗೆ ಮರಳಿ ಬರಲಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

ಷೇರು ಮಾರುಕಟ್ಟೆಯ ಕಳಪೆ ಸಾಧನೆಯು ಕೂಡ ನಿವ್ವಳ ಒಳಹರಿವು ಕಡಿಮೆಯಾಗಲು ಕಾರಣವಾಗಿದೆ. ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಸಾಧನೆಯು ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.