ಗೋಡ್ಯಾಡಿ: 10 ಲಕ್ಷಕ್ಕೂ ಅಧಿಕ ಗ್ರಾಹಕರು

7

ಗೋಡ್ಯಾಡಿ: 10 ಲಕ್ಷಕ್ಕೂ ಅಧಿಕ ಗ್ರಾಹಕರು

Published:
Updated:

ಬೆಂಗಳೂರು: ಇಂಟರ್‌ನೆಟ್‌ ಡೊಮೈನ್ ಸೇವೆ ಒದಗಿಸುವ ‘ಗೋಡ್ಯಾಡಿ (GoDaddy) ಸಂಸ್ಥೆಯು ಭಾರತದಲ್ಲಿ 10 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದುವ ಮೂಲಕ ಹೊಸ ಮೈಲುಗಲ್ಲು ದಾಖಲಿಸಿದೆ.

‘ಈ ಸಾಧನೆಗೆ ಕಾರಣರಾದ ಪ್ರತಿಯೊಬ್ಬ ಗ್ರಾಹಕರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಗ್ರಾಹಕರಿಗೆ ಹೊಸ ಸೇವೆಗಳನ್ನು ಕಲ್ಪಿಸುವುದಷ್ಟೇ ಅಲ್ಲದೆ ಅವರಿಗೆ ಹತ್ತಿರವಾಗಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನೂ ನಿರಂತರವಾಗಿ ಮಾಡುತ್ತಿದ್ದೇವೆ. ಇನ್ನೂ ಉತ್ತಮ ಸೇವೆ ನೀಡುವ ಪ್ರಯತ್ನ ನಡೆಯುತ್ತಿದೆ’ ಎಂದು ಸಂಸ್ಥೆಯ ಉಪಾಧ್ಯಕ್ಷ ನಿಖಿಲ್‌ ಅರೋರಾ ತಿಳಿಸಿದರು.

‘ಡಿಜಿಟಲ್‌ ಇಂಡಿಯಾಕ್ಕೆ ಕೊಡುಗೆ ನೀಡುವ ನಮ್ಮ ಬದ್ಧತೆ ಮುಂದುವರಿಯಲಿದೆ. 2022ರ ವೇಳೆಗೆ ದೇಶದಲ್ಲಿ ಇರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ (ಎಸ್‌ಎಂಇ) ಒಂದು ಮೂರಾಂಶದಷ್ಟು ಉದ್ದಿಮೆಗಳು (1/3) ಆನ್‌ಲೈನ್‌ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿದೆ. ಈ ಹಾದಿಯಲ್ಲಿ ಉದ್ಯಮಗಳಿಗೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡಲು ‘ಗೋಡ್ಯಾಡಿ’ ಪ್ರಮುಖ ಪಾತ್ರ ವಹಿಸಲು ಬಯಸುತ್ತದೆ’ ಎಂದರು.

‘ಡೊಮೈನ್ ಹೆಸರು ನೋಂದಣಿ ಮಾಡುವುದರಿಂದ ಹಿಡಿದು, ವೆಬ್‌ಸೈಟ್‌ ಸೃಷ್ಟಿಸಿ ಆನ್‌ಲೈನ್‌ನಲ್ಲಿ ವಹಿವಾಟು ನಿರ್ವಹಣೆ ಮಾಡುವವರೆಗೂ ನಮ್ಮ ಸಂಸ್ಥೆಯು ಉದ್ಯಮಗಳಿಗೆ ನೆರವಾಗುತ್ತಿದೆ. ಕನ್ನಡವನ್ನೂ ಒಳಗೊಂಡು ಒಟ್ಟು 7 ಭಾಷೆಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಗ್ರಾಹಕರ ಸೇವಾ ಕೇಂದ್ರ ಇದೆ. ಇದರಿಂದ ಗ್ರಾಹಕರಿಗೆ ತಾವು ಮಾತನಾಡುವ ಭಾಷೆಯಲ್ಲಿಯೇ ತಂತ್ರಜ್ಞಾನದ ತಿಳಿವಳಿಕೆ ನೀಡಿ ವಹಿವಾಟು ವಿಸ್ತರಣೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದರು.

‘ಎಸ್‌ಎಂಇಗಳು, ಉದ್ಯಮಿಗಳು, ಅಂತರ್ಜಾಲ ಕ್ಷೇತ್ರದ ವೃತ್ತಿಪರರು ಹಾಗೂ ಮರು ಮಾರಾಟಗಾರರಿಗೆ ನೆರವಾಗುವ ಮೂಲಕ ದೇಶದಲ್ಲಿ ಇನ್ನೂ ಉತ್ತಮ ರೀತಿಯ ಪ್ರಗತಿ ಸಾಧಿಸುವ ಯೋಜನೆ ಹೊಂದಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry