ಕನಿಷ್ಠ ಬೆಂಬಲ ಬೆಲೆ: ಶೀಘ್ರ ಒಪ್ಪಿಗೆ

7

ಕನಿಷ್ಠ ಬೆಂಬಲ ಬೆಲೆ: ಶೀಘ್ರ ಒಪ್ಪಿಗೆ

Published:
Updated:

ನವದೆಹಲಿ: ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಸಂಬಂಧ ರೂಪಿಸಿರುವ ಬೆಂಬಲ ಬೆಲೆ ನೀತಿಗೆ ಕೃಷಿ ಸಚಿವಾಲಯ ಶೀಘ್ರವೇ ಸಂಸತ್‌ ಒಪ್ಪಿಗೆ ಪಡೆಯಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಬಲ ಬೆಲೆ ನೀತಿಯಲ್ಲಿ ಹೇಳಿರುವಂತೆ, ಗೋಧಿ ಮತ್ತು ಭತ್ತ ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳ ಧಾರಣೆಯು ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇರುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ರೈತರಿಂದ ಬೆಂಬಲ ಬೆಲೆಗೆ ಖರೀದಿ ಮಾಡಬೇಕು.

ಮಾರುಕಟ್ಟೆ ಖಾತರಿ ಯೊಜನೆ (ಎಂಎಎಸ್‌), ಮಾರಾಟ ಬೆಲೆ ಕಡಿಮೆ ಇದ್ದಾಗ ‘ಎಂಎಸ್‌ಪಿ’ ಮತ್ತು ನೈಜ ಬೆಲೆಯ ನಡುವಣ ವ್ಯತ್ಯಾಸವನ್ನು ತುಂಬಿಕೊಡುವ ಬೆಲೆ ಸಂಗ್ರಹ ಯೋಜನೆ (ಪಿಡಿಪಿಎಸ್‌) ಹಾಗೂ ಖಾಸಗಿ ಸಂಗ್ರಹ ಮತ್ತು ದಾಸ್ತಾನು ಯೋಜನೆ ಎಂಬ ಮೂರು ಮಾದರಿಗಳನ್ನು ಕೃಷಿ ಸಚಿವಾಲಯ ಪ್ರಸ್ತಾಪಿಸಿದೆ. ರಾಜ್ಯಗಳು ಈ ಮೂರು ಮಾದರಿಗಳಲ್ಲಿ ಯಾವುದಾದರೂ ಒಂದನ್ನು ಅಳವಡಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry