ಸಿರಿಯಾ ಮೇಲೆ ದಾಳಿ ನಿರ್ಣಯ ಕೈಗೊಳ್ಳಲು ಭದ್ರತಾ ಮಂಡಳಿ ವಿಫಲ

7

ಸಿರಿಯಾ ಮೇಲೆ ದಾಳಿ ನಿರ್ಣಯ ಕೈಗೊಳ್ಳಲು ಭದ್ರತಾ ಮಂಡಳಿ ವಿಫಲ

Published:
Updated:

ವಿಶ್ವಸಂಸ್ಥೆ: ಸಿರಿಯಾದಲ್ಲಿ ರಾಸಾಯನಿಕ ದಾಳಿ ಕುರಿತು ತನಿಖೆಗೆ ಮತ್ತು ಸತ್ಯಶೋಧನಾ ಸಮಿತಿ ಕಳುಹಿಸುವ ಬಗ್ಗೆ ನಿರ್ಣಯ ಕೈಗೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಫಲವಾಗಿದೆ.

ತನಿಖೆ ಕೈಗೊಳ್ಳುವ ಕುರಿತು ಅಮೆರಿಕ ರಚಿಸಿದ್ದ ಕರಡು ಪ್ರತಿಗೆ ರಷ್ಯಾ ವಿರೋಧ ವ್ಯಕ್ತಪಡಿಸಿ ವಿಟೊ ಚಲಾಯಿಸಿತು. ಇದರಿಂದ ಈ ನಿರ್ಣಯ ತಿರಸ್ಕೃತಗೊಂಡಿತು.

‘ಕರಡು ರಚಿಸುವಾಗ ಸಂಬಂಧಿಸಿದ ಎಲ್ಲ ರಾಷ್ಟ್ರಗಳ ಅಭಿಪ್ರಾಯ ಪಡೆಯಲಾಗಿತ್ತು. ರಷ್ಯಾದ ಅಭಿಪ್ರಾಯಗಳನ್ನು ಸಹ ಸೇರಿಸಲಾಗಿತ್ತು’ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.

ಹ್ಯಾಲೆ ಅಭಿಪ್ರಾಯಕ್ಕೆ ಆಕ್ಷೇಪವ್ಯಕ್ತಪಡಿಸಿದ ವಿಶ್ವಸಂಸ್ಥೆಯಲ್ಲಿನ ರಷ್ಯಾದ ರಾಯಭಾರಿ ವಾಸಿಲಿ ನೆಬೆನ್ಜಿಯಾ, ‘ಸಿರಿಯಾ ವಿಷಯದಲ್ಲಿ ಅಮೆರಿಕ ಅಂತರರಾಷ್ಟ್ರೀಯ ಸಮುದಾಯದ ದಾರಿ ತಪ್ಪಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry