ಟೋಕಿಯೊದತ್ತ ಹಾರ್ಟನ್ ಚಿತ್ತ

7

ಟೋಕಿಯೊದತ್ತ ಹಾರ್ಟನ್ ಚಿತ್ತ

Published:
Updated:
ಟೋಕಿಯೊದತ್ತ ಹಾರ್ಟನ್ ಚಿತ್ತ

ಗೋಲ್ಡ್ ಕೋಸ್ಟ್‌ (ರಾಯಿಟರ್ಸ್‌): ಕಾಮನ್‌ವೆಲ್ತ್ ಕ್ರೀಡಾಕೂಟದ 400 ಮೀಟರ್ಸ್ ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಚಾಂಪಿಯನ್‌ ಆದ ಆಸ್ಟ್ರೇಲಿಯಾದ ಮೆಕ್‌ ಹಾರ್ಟನ್‌ ಟೋಕಿಯೊ ಒಲಿಂಪಿಕ್ಸ್‌ನತ್ತ ಚಿತ್ತ ಹರಿಸಿರುವುದಾಗಿ ತಿಳಿಸಿದ್ದಾರೆ.

‘ಇಲ್ಲಿ 1500 ಮೀಟರ್ಸ್ ಸ್ಪರ್ಧೆಯ ಕಡೆಗೆ ಹೆಚ್ಚು ಗಮನ ಕೊಟ್ಟಿಲ್ಲ. ಆದ್ದರಿಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟೋಕಿಯೊದಲ್ಲಿ ಈ ಸ್ಪರ್ಧೆಯಲ್ಲಿ ಮಿಂಚು ಹರಿಸುವ ಭರವಸೆ ಇದೆ’ ಎಂದು ಅವರು ತಿಳಿಸಿದರು.

2013ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ 1500 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಹಾರ್ಟನ್‌ ವಿವಿಧ ಕೂಟಗಳಲ್ಲಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry