ಟೇಬಲ್‌ ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ಶರತ್‌ ಕಮಲ್‌

7

ಟೇಬಲ್‌ ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ಶರತ್‌ ಕಮಲ್‌

Published:
Updated:

ಗೋಲ್ಡ್‌ ಕೋಸ್ಟ್‌: ಭಾರತದ ಟೇಬಲ್‌ ಟೆನಿಸ್‌ ಆಟಗಾರ ಶರತ್‌ ಕಮಲ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಶರತ್‌ 11–2, 11–5, 11–4, 7–11, 11–13, 6–11, 11–7ರಲ್ಲಿ ಮಲೇಷ್ಯಾದ ಜೇವನ್‌ ಚೂಂಗ್‌ ಅವರನ್ನು ಸೋಲಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 48ನೇ ಸ್ಥಾನ ದಲ್ಲಿರುವ ಶರತ್‌  ಮೊದಲ ಮೂರು ಗೇಮ್‌ಗಳಲ್ಲಿ ಮಿಂಚಿನ ಆಟ ಆಡಿ 3–0ರ ಮುನ್ನಡೆ ಗಳಿಸಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 488ನೇ ಸ್ಥಾನದಲ್ಲಿರುವ ಚೂಂಗ್‌, ನಾಲ್ಕು, ಐದು ಮತ್ತು ಆರನೆ ಗೇಮ್‌ಗಳಲ್ಲಿ ಗೆದ್ದು 3–3ರಲ್ಲಿ ಸಮಬಲ ಮಾಡಿಕೊಂಡರು.

ನಿರ್ಣಾಯಕ ಎನಿಸಿದ್ದ ಏಳನೆ ಗೇಮ್‌ನಲ್ಲಿ ಮಿಂಚಿದ ಶರತ್‌ ಪಂದ್ಯ ಗೆದ್ದು ಸಂಭ್ರಮಿಸಿದರು.

ಇನ್ನೊಂದು ಪಂದ್ಯದಲ್ಲಿ ಜಿ.ಸತ್ಯನ್‌ 11–5, 11–3, 11–5, 11–3ರಲ್ಲಿ ಪಾಕಿಸ್ತಾನದ ಮಹಮ್ಮದ್‌ ರಮೀಜ್‌ ಅವರನ್ನು ಸೋಲಿಸಿದರು.

ಸತಿಯಾನ್‌ ಅವರು ನಾಲ್ಕು ಗೇಮ್‌ಗಳಲ್ಲೂ ಕೆಚ್ಚೆದೆಯ ಆಟ ಆಡಿ ಎದುರಾಳಿಯ ಸವಾಲು ಮೀರಿದರು.

ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಶರತ್‌ ಮತ್ತು ಸತ್ಯನ್‌ 11–2, 11–5, 11–6ರಲ್ಲಿ ತೌರಾಮೊ ಮಿಟಾ ಮತ್ತು ನೊವ ಟಾಕೂ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry