ವಿಶ್ವಾಸ ತುಂಬಲಿರುವ ಚಿನ್ನದ ಸಾಧನೆ

7

ವಿಶ್ವಾಸ ತುಂಬಲಿರುವ ಚಿನ್ನದ ಸಾಧನೆ

Published:
Updated:
ವಿಶ್ವಾಸ ತುಂಬಲಿರುವ ಚಿನ್ನದ ಸಾಧನೆ

ಮುಂಬೈ: ‘ಕಾಮನ್‌ವೆಲ್ತ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಭಾರತ ತಂಡದ ಆಟಗಾರರು ಯುವ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿದ್ದಾರೆ’ ಎಂದು ಹಿರಿಯ ಟೇಬಲ್‌ ಟೆನಿಸ್‌ ಆಟಗಾರ ಕಮಲೇಶ್‌ ಮೆಹ್ತಾ ಹೇಳಿದ್ದಾರೆ.

‘ಭಾರತದ ಆಟಗಾರರು ಎದುರಾಳಿ ಗಳ ಸವಾಲು ಮೆಟ್ಟಿ ನಿಂತು ಜಯ ಗಳಿಸಿದ್ದಾರೆ. ಅವರೆಲ್ಲರೂ ಅದ್ಭುತವಾದ ಆಟವಾಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

‘ಈ ಸಾಧನೆಯು ಮುಂದಿನ ಪೀಳಿಗೆಯ ಆಟಗಾರರಿಗೆ ಮಾದರಿ. ಶ್ರೇಷ್ಠ ಆಟಗಾರರನ್ನು ಸೋಲಿಸಿ ತಾವು ಕೂಡ ಚಾಂಪಿಯನ್‌ಗಳಾಗಬಹುದು ಎಂಬ ವಿಶ್ವಾಸವನ್ನು  ಯುವ ಕ್ರೀಡಾಪಟುಗಳಲ್ಲಿ ತುಂಬಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಟೇಬಲ್‌ ಟೆನಿಸ್‌ ತಂಡದವರು ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry